ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳಿಂದ ಜಯ ಸಾಧಿಸಿವ ಮೂಲಕ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿತು.
ಲಖನೌ ಸೂಪರ್ ಜೈಂಟ್ಸ್ ನೀಡಿದ್ದ 142 ರನ್‌ಗಳ ಗುರಿಯನ್ನು 17.1 ಓವರ್‌ಗಳಲ್ಲಿ ತಲುಪುವ ಮೂಲಕ ಡೆಲ್ಲಿ 17 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.
ಇನ್ನಿಂಗ್ಸ್ ಆರಂಭದ ಮೊದಲ ಎಸೆತದಲ್ಲಿಯೇ ಕೆ.ಎಲ್ ರಾಹುಲ್ ಅವರನ್ನು ಮೊಹಮ್ಮದ್ ಶಮಿ ಔಟ್ ಮಾಡಿದರು. 4.3 ಓವರ್‌ಗಳಲ್ಲಿಯೇ 26ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ ತಂಡಕ್ಕೆ ಸಮೀರ್ ರಿಜ್ವಿ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಜೋಡಿ 119 ರನ್‌ಗಳ ಜತೆಯಾಟ ನಡೆಸುವ ಮೂಲಕ ಗೆಲುವಿನ ಗುರಿ ಮುಟ್ಟಿಸಿತು.
ಸಮೀರ್ ರಿಜ್ವಿ 47 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ನೆರವಿನಿಂದ ಅಜೇಯ 70 ರನ್ ಗಳಿಸಿದರು. ಟ್ರಿಸ್ಟಾನ್ ಸ್ಟಬ್ಸ್ 32 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 39 ರನ್‌ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದು ಲಖನೌಗೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಅಚ್ಚರಿಯೆಂಬಂತೆ ನಾಯಕ ರಿಶಬ್ ಪಂತ್ ಆರಂಭಿಕರಾಗಿ ಮಿಚೆಲ್ ಮಾರ್ಷ್ ಕಣಕ್ಕಿಳಿದರು. ಲಖನೌ ಅಭಿಮಾನಿಗಳು ಪಂತ್‌ರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಿದ್ದರು. ಆದ್ರೆ, ಎಲ್‌ಎಸ್‌ಜಿ ಪವರ್‌ಪ್ಲೇನಲ್ಲೇ ನೀರಸ ಬ್ಯಾಟಿಂಗ್ ಪ್ರದರ್ಶಿಸಿದರು. ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲೇ ಮಾರ್ಷ್ ಬಾರಿಸಿದ ಚೆಂಡು ನೇರವಾಗಿ ಎದುರಾಳಿಯ ಸ್ಟಂಪ್ಸ್‌ಗೆ ಬಡಿಯಿತು. ಈ ವೇಳೆ ಮುಕೇಶ್ ಕುಮಾರ್ ಕೈ ತಗುಲಿ ಸ್ಟಂಪ್ಸ್ ಉರುಳಿದ ಕಾರಣ, ಕ್ರೀಸ್ ಬಿಟ್ಟಿದ ಪಂತ್ ಔಟಾಗಬೇಕಾಯಿತು.
ಮಾರ್ಷ್ ಜೊತೆಗೂಡಿದ ಏಡೇನ್ ಮಾಕ್ರಂ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ನಿರೀಕ್ಷೆ ಮೂಡಿಸಿದರು. ಆದ್ರೆ, 11 ರನ್‌ಗಳಿಸಿದ ಮಾರ್ಕ್ರಂ ಅವರನ್ನು ಅಕ್ಷರ್ ಪಟೇಲ್ ಕ್ಲೀನ್ ಬೌಲ್ಡ್ ಮಾಡಿದರು. ಇದರಿಂದ, ಪವರ್‌ಪ್ಲೇನಲ್ಲೇ 50 ರನ್ ಕೂಡ ತಲುಪದ ಅತಿಥೇಯರು 2 ವಿಕೆಟ್‌ಗಳನ್ನು ಕಳೆದುಕೊಂಡಿತು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಆಯೂಶ್ ಬಡೋನಿ ಎದುರಿಸಿದ 3 ಎಸೆತಗಳಲ್ಲಿ ಶೂನ್ಯ ಸಂಪಾದನೆ ಮಾಡಿದರು.
ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಬ್ಯಾಟ್‌ನಿಂದ ಕೇವಲ 8 ರನ್‌ಗಳಷ್ಟೇ ಬಂದವು. ಆರಂಭಿಕರಾಗಿ ಅರ್ಧಶತಕ ಬಾರಿಸುವ ನಿರೀಕ್ಷೆ ಮೂಡಿಸಿದ ಮಿಚೆಲ್ ಮಾರ್ಷ್ 35 ರನ್‌ಗಳಿಸಿ ಇದೇ ವೇಳೆ ಔಟಾಗುತ್ತಿದ್ದಂತೆ, ಲಖನೌ ಅಭಿಮಾನಿಗಳಲ್ಲಿದ್ದ ಉತ್ಸಾಹವೇ ಮರೆಯಾಯಿತು. ಸಂಕಷ್ಟದ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡಲು ಬಂದ ಅಬ್ದುಲ್ ಸಮಾದ್ ಮಾತ್ರ ಸಮಾಧಾನಕರ ಬ್ಯಾಟಿಂಗ್ ಮಾಡಿದರು. 3 ಬೌಂಡರಿ 1 ಸಿಕ್ಸರ್ ಸಮೇತ 36 ರನ್‌ಗಳನ್ನು ಗಳಿಸಿದರು.























