Home Advertisement
Home ಸುದ್ದಿ ದೇಶ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ BJP ಸೇರ್ಪಡೆ

ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ BJP ಸೇರ್ಪಡೆ

0
99

ಟಿಎಂಸಿಯಿಂದ ಬಿಜೆಪಿ ಕಡೆಗೆ ಲಿಯಾಂಡರ್ ಪೇಸ್ ಪಯಣ

ನವದೆಹಲಿ/ಕೋಲ್ಕತ್ತಾ : ಪಶ್ಚಿಮ ಬಂಗಾಳ ಚುನಾವಣೆ ಹೊತ್ತಲ್ಲೇ ಭಾರತೀಯ ಟೆನಿಸ್ ದಿಗ್ಗಜ ಲಿಯಾಂಡರ್‌ಪೇಸ್‌ (Leander Paes) ರಾಜಕೀಯ ವಲಯದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ, ಅವರು ಇಂದು ಭಾರತೀಯ ಜನತಾ ಪಾರ್ಟಿ (BJP)ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ಸುಕಾಂತ ಮಜುಂದಾರ್ ಅವರ ಸಮ್ಮುಖದಲ್ಲಿ ಈ ಸೇರ್ಪಡೆ ನಡೆದಿದೆ.

ರಾಜಕೀಯಕ್ಕೆ ಹೊಸ ಪಯಣ : ಡೇವಿಸ್ ಕಪ್‌ನ ಮಾಜಿ ತಾರೆ ಆಗಿರುವ ಪೇಸ್ ಅವರ ಬಿಜೆಪಿ ಸೇರ್ಪಡೆ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಕ್ರೀಡಾಂಗಣದಲ್ಲಿ ಅಪಾರ ಸಾಧನೆ ಮಾಡಿರುವ ಪೇಸ್ ಇದೀಗ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಪಾತ್ರವನ್ನು ವಿಸ್ತರಿಸಲು ಮುಂದಾಗಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಪಕ್ಷ ಬದಲಾವಣೆಯ ಹಿನ್ನೆಲೆ : ಲಿಯಾಂಡರ್‌ಪೇಸ್‌ ಅವರಿಗೆ ರಾಜಕೀಯ ಹೊಸದೇನಲ್ಲ. ಅವರು ಈ ಹಿಂದೆ ತೃಣಮೂಲ ಕಾಂಗ್ರೆಸ್ (All India Trinamool Congress) ಜೊತೆಗೂಡಿ 2022ರ ಗೋವಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು. ಆದರೆ ಸ್ವತಃ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿರಲಿಲ್ಲ. ಇದೀಗ ಬಿಜೆಪಿ ಸೇರ್ಪಡೆ ಮೂಲಕ ಅವರ ರಾಜಕೀಯ ದಿಕ್ಕು ಸ್ಪಷ್ಟವಾಗುತ್ತಿದೆ.

ಚುನಾವಣೆ ಮೇಲೆ ಪರಿಣಾಮ? : ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆಯ ಸಂದರ್ಭದಲ್ಲಿ ಪೇಸ್ ಸೇರ್ಪಡೆ ಬಿಜೆಪಿಗೆ ಹೆಚ್ಚುವರಿ ಪ್ರಚಾರ ಬಲ ನೀಡುವ ಸಾಧ್ಯತೆ ಇದೆ. ಆದರೆ ಅವರು ಮುಂದಿನ ದಿನಗಳಲ್ಲಿ ಸ್ಪರ್ಧಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ನಾಯಕರ ಪ್ರತಿಕ್ರಿಯೆ : ಈ ಕುರಿತು ಪ್ರತಿಕ್ರಿಯಿಸಿದ ಕಿರಣ್ ರಿಜಿಜು, “ಲಿಯಾಂಡರ್ ಪೇಸ್ ಅವರ ಬಿಜೆಪಿ ಸೇರ್ಪಡೆ ಐತಿಹಾಸಿಕ ಬೆಳವಣಿಗೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕ್ರೀಡೆಗೆ ಸಿಕ್ಕಿರುವ ಪ್ರೋತ್ಸಾಹವೇ ಇದಕ್ಕೆ ಕಾರಣ” ಎಂದು ಹೇಳಿದ್ದಾರೆ.