ಬೆಂಗಳೂರು: ಐಪಿಎಲ್ ಪಂದ್ಯ ವೀಕ್ಷಣೆಗಾಗಿ ಶಾಸಕರಿಗೆ ವಿಐಪಿ ಪಾಸ್ ನೀಡಬೇಕೆಂಬ ಬೇಡಿಕೆಯನ್ನು ಕೊನೆಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈಡೇರಿಸಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೆಎಸ್‌ಸಿಎ ಪ್ರತಿ ಶಾಸಕರಿಗೆ ತಲಾ 2 ಟಿಕೆಟ್ ನೀಡಲು ಒಪ್ಪಿಕೊಂಡಿದೆ.
ಪ್ರತಿಯೊಬ್ಬ ಶಾಸಕರಿಗೆ ತಲಾ ಐದು ಟಿಕೆಟ್ ನೀಡಬೇಕು ಎಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರು ಸದನದಲ್ಲಿ ಆಗ್ರಹಿಸಿದ್ದರು.
ಶಾಸಕರ ಈ ಟಿಕೆಟ್ ಬೇಡಿಕೆ ವಿಚಾರ ಗೊಂದಲವುಂಟು ಮಾಡುತ್ತಿದ್ದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೆಎಸ್‌ಸಿಎ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ಶಾಸಕರಿಗೆ ತಲಾ 2 ಟಿಕೆಟ್ ನೀಡಲು ನಿರ್ಧರಿಸಲಾಯಿತು.
ಈ ಟೂರ್ನಿಯಲ್ಲಿ ಪ್ರೇಕ್ಷಕರ ಬೇಡಿಕೆ ಹೆಚ್ಚಾಗಿದೆ. ಮುಂದಿನ ಟೂರ್ನಿಗಳಲ್ಲಿ ತಲಾ 4 ಟಿಕೆಟ್‌ಗಳನ್ನು ಕಾಯ್ದಿರಿಸಲಾಗುವುದು ಎಂದು ಕೆಎಸ್‌ಸಿಎ ಸಭೆಯಲ್ಲಿ ಸ್ಪಷ್ಟಪಡಿಸಿದ್ದು, ಟಿಕೆಟ್ ಸಿಗದ ಶಾಸಕರು ಕೊಂಚ ನಿರಾಳವಾಗುವಂತೆ ಮಾಡಿದೆ.






















