Home Advertisement
Home ಕ್ರೀಡೆ IPL ಟಿಕೆಟ್ ವಿವಾದ: ಶಾಸಕರ ಪರ ಡಿಕೆಶಿ ಬ್ಯಾಟಿಂಗ್

IPL ಟಿಕೆಟ್ ವಿವಾದ: ಶಾಸಕರ ಪರ ಡಿಕೆಶಿ ಬ್ಯಾಟಿಂಗ್

0
91

ಬೆಂಗಳೂರು: ಐಪಿಎಲ್ ಪಂದ್ಯಗಳ VIP ಟಿಕೆಟ್‌ ವಿಚಾರವಾಗಿ ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ. ಈ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಾಸಕರ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿ, “ಶಾಸಕರು ಕೂಡ ವ್ಯವಸ್ಥೆಯ ಭಾಗ. ಅವರಿಗೆ ಅಗತ್ಯ ಸೌಲಭ್ಯ ಒದಗಿಸುವುದು ತಪ್ಪಲ್ಲ” ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (KSCA) ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದು, ಶಾಸಕರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

IPL ಟಿಕೆಟ್ ವಿಚಾರ – ರಾಜಕೀಯ ತಿಕ್ಕಾಟ: ಐಪಿಎಲ್ ಟಿಕೆಟ್ ಹಂಚಿಕೆ ವಿಚಾರವಾಗಿ ವಿವಾದ ಸೃಷ್ಟಿಯಾಗಿದ್ದು, ಸಂಸದ ತೇಜಸ್ವಿ ಸೂರ್ಯ ಅವರು ಶಾಸಕರ ಬೇಡಿಕೆಯನ್ನು ವಿರೋಧಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, “ತೇಜಸ್ವಿ ಸೂರ್ಯ ತಮ್ಮ ಪಕ್ಷದವರಿಗೇ ಜ್ಞಾನ ಹೇಳಲಿ, ನಮಗೆ ಬೇಡ” ಎಂದು ಕಿಡಿಕಾರಿದರು.

ಗೃಹ ಸಚಿವರ ಪ್ರತಿಕ್ರಿಯೆ : ಈ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ ಪ್ರತಿಕ್ರಿಯಿಸಿ, ಶಾಸಕರ ಆಸಕ್ತಿಯನ್ನ ಮೆಚ್ಚುತ್ತೇನೆ, ಮಾಜಿ ಕ್ರೀಡಾಪಟುವಾಗಿ, ಅವರು ಕ್ರೀಡೆಗಳಲ್ಲಿ ತುಂಬಾ ಆಸಕ್ತಿ ತೋರಿಸುವುದರಿಂದ ನನಗೆ ಇದು ಇಷ್ಟವಾಯಿತು. ಇದು ಒಳ್ಳೆಯ ಬೆಳವಣಿಗೆ. ಇನ್ನು ಟಿಕಟ್‌ ವಿಚಾರವಾಗಿ “ಇದು ಸ್ಪೀಕರ್ ಕಚೇರಿ ಹಾಗೂ ಕೆಎಸ್‌ಸಿಎ ನಡುವೆ ನಿರ್ಧಾರವಾಗಬೇಕಾದ ವಿಷಯ. ಶಾಸಕರು ಸ್ಪೀಕರ್ ವ್ಯಾಪ್ತಿಗೆ ಬರುತ್ತಾರೆ. ಅವರು ಸೂಕ್ತ ಕ್ರಮ ಕೈಗೊಳ್ಳಬಹುದು” ಎಂದಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಭಿನ್ನಾಭಿಪ್ರಾಯ : ಈ ವಿಚಾರ ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶಾಸಕರಿಗೆ ವಿಶೇಷ ಸೌಲಭ್ಯ ನೀಡುವುದು ಸರಿಯೆಂದು ಹೇಳುತ್ತಿದ್ದರೆ, ಮತ್ತೊಂದೆಡೆ “ಜನರು ಟಿಕೆಟ್ ಖರೀದಿಸಬೇಕಾದರೆ, ಶಾಸಕರೂ ಕೂಡ ಖರೀದಿಸಬೇಕು” ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಸಮಾನತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.