Home Advertisement
Home ನಮ್ಮ ಜಿಲ್ಲೆ ಬೆಂಗಳೂರು ತಾಯಿಯ ಅಕ್ರಮ ಸಂಬಂಧಕ್ಕೆ ಬಿತ್ತು 2 ಹೆಣ; ಚುಚ್ಚಿ, ಚುಚ್ಚಿ ಕೊಂದ ಅಪ್ರಾಪ್ತನ ಕ್ರೌರ್ಯಕ್ಕೆ ಬೆಚ್ಚಿ...

ತಾಯಿಯ ಅಕ್ರಮ ಸಂಬಂಧಕ್ಕೆ ಬಿತ್ತು 2 ಹೆಣ; ಚುಚ್ಚಿ, ಚುಚ್ಚಿ ಕೊಂದ ಅಪ್ರಾಪ್ತನ ಕ್ರೌರ್ಯಕ್ಕೆ ಬೆಚ್ಚಿ ಬಿದ್ದಿದೆ ಬೆಂಗಳೂರು

0
38

ಅಕ್ರಮ ಸಂಬಂಧಕ್ಕೆ ಇಬ್ಬರು ದಾರುಣವಾಗಿ ಬಲಿಯಾದ ಭಯಾನಕ ಘಟನೆ ಇದು. ಈ ಫೋಟೋದಲ್ಲಿರೋ ಮಹಿಳೆ ಹೆಸರು ಯಮುನಾ. ಈಕೆಗೆ 36 ವರ್ಷ. ಈ ವ್ಯಕ್ತಿಯ ಹೆಸರು ಸುದೀಪ್. 34 ವರ್ಷ ವಯಸ್ಸು. ಈ ಇಬ್ಬರ ಹತ್ಯೆಗಳು ಇಡೀ ಬೆಂಗಳೂರನ್ನೆ ಬೆಚ್ಚಿ ಬೀಳಿಸಿದೆ.

ಯಮುನಾ, ಸುದೀಪ್ ಇಬ್ಬರನ್ನು ಅಪ್ರಾಪ್ತನೊಬ್ಬ ಭೀಕರವಾಗಿ ಸಾಯಿಸಿದ್ದಾನೆ. ಮಲ್ಲೇಶಗೌಡನ ಕುಟುಂಬ ತಿಗಳರಪಾಳ್ಯದಲ್ಲಿ ವಾಸವಿದ್ದಾಗ, ಛಾಯಾ ಅವರ ಮನೆ ಎದುರೇ ಇತ್ತು. ಈ ವೇಳೆ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಕೆಲವು ತಿಂಗಳ ಹಿಂದೆ ಛಾಯಾ ಮನೆ ಶಿಫ್ಟ್ ಮಾಡಿದ್ದಾರೆ. ಆದ್ರೆ ಛಾಯಾ ಮಾಯೆಗೆ ಸಿಲುಕಿದ್ದ ಮಲ್ಲೇಶಗೌಡ ಅಲ್ಲಿಗೂ ಹೋಗುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಈಗಾಗಲೇ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಯಮುನಾ ಆಕೆಯ ತಮ್ಮ ಸುದೀಪ್. ಈ ಇಬ್ಬರ ಕೊಲೆ ಮಾಡಿರೋದು ಬೇರೆ ಯಾರೂ ಅಲ್ಲ. ಛಾಯಾಳ ಅಪ್ರಾಪ್ತ ಮಗ ಎನ್ನಲಾಗಿದೆ. ಮಲ್ಲೇಶಗೌಡನ ಹೆಂಡತಿ ಯಮುನಾ ಮತ್ತು ಸುದೀಪ್, ಅಕ್ರಮ ಸಂಬಂಧವನ್ನು ಪ್ರಶ್ನಿಸಲು ಛಾಯಾ ಮನೆಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ದೊಡ್ಡ ಜಗಳ ನಡೆದಿದೆ.

ಒಂದು ಮಾಹಿತಿಯ ಪ್ರಕಾರ ಯಮುನಾ ಮತ್ತು ಸುದೀಪ್ ಅವರೇ ಚಾಕು ಹಿಡಿದು ಛಾಯಾ ಅವರ ಮನೆಗೆ ತೆರಳಿದ್ದರಂತೆ. ಈ ವೇಳೆ ತನ್ನ ತಾಯಿ ಛಾಯಾಳನ್ನು ಇವರು ಸಾಯಿಸಬಹುದು ಎಂಬ ಭಯದಿಂದ ಬಾಲಕನಿಗೆ ಕಾಡಿದೆ. ಅವರ ಕೈಯಲ್ಲಿದ್ದ ಚಾಕುವನ್ನೇ ಕಸಿದುಕೊಂಡು ಇಬ್ಬರಿಗೂ ಹತ್ತಾರು ಬಾರಿ ಇರಿದಿದ್ದಾನೆ. ಇರಿತದ ತೀವ್ರತೆಗೆ ಯಮುನಾ ಮತ್ತು ಸುದೀಪ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ.

ಇದೆಲ್ಲಾ ಆದ ಮೇಲೆ ಗಾಬರಿಗೊಂಡ ಅಪ್ರಾಪ್ತ ರೂಮ್‌ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಪೀಣ್ಯಾ ಪೊಲೀಸರು ಬಂದರೂ ಬಾಲಕ ಬಾಗಿಲು ತೆರೆದಿಲ್ಲ. ಅಪ್ರಾಪ್ತನ ತಂದೆ ಸ್ಥಳಕ್ಕೆ ಬಂದು ಹೇಳಿದ ಮೇಲೆ ಬಾಗಿಲು ತೆರೆದು ಹೊರಗೆ ಬಂದಿದ್ದಾನೆ.

ಇನ್ನೊಂದು ಕಡೆ ತಾಯಿ ಯಮುನಾ ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಆಕೆಯ ಮಗಳು ತೀವ್ರ ಆಘಾತಕ್ಕೊಳಗಾಗಿದ್ದಾಳೆ. ಮನನೊಂದು ಆಕೆ ಕೂಡ ಪ್ರಾಣ ಬಿಡಲು ಯತ್ನಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಘಟನೆ ಕುರಿತು ಮೃತ ಸುದೀಪ್ ಮಾವ ಸುರೇಶ ಮಾತನಾಡಿದ್ದಾರೆ. “ನಮ್ಮ ಮಗಳನ್ನು ಸುದೀಪ್‌ಗೆ ಮದುವೆ ಮಾಡಿ ಕೊಟ್ಟಿದ್ದೆವು. ಆಫೀಸ್‌ಗೆ ಹೋಗುತ್ತೇನೆ ಅಂತ ಹೇಳಿ ಅವರ ಅಕ್ಕನ ಮನೆಗೆ ಹೋಗಿದ್ದಾನೆ. ಈಗ ನೋಡಿದರೆ ಅಳಿಯನ್ನನ್ನೇ ಕಳೆದುಕೊಡಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ. ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.