Home Advertisement
Home ಸುದ್ದಿ ದೇಶ ಮದುವೆ ಆಯ್ತು ಈಗ ಸಿನಿಮಾ ಡೈರೆಕ್ಟರ್‌ನ ಸರದಿ.. ಕುಂಭಮೇಳದ ಮೊನಾಲಿಸಾ ಕಣ್ಣೀರು; ಏನಿದರ ಅಸಲಿಯತ್ತು?

ಮದುವೆ ಆಯ್ತು ಈಗ ಸಿನಿಮಾ ಡೈರೆಕ್ಟರ್‌ನ ಸರದಿ.. ಕುಂಭಮೇಳದ ಮೊನಾಲಿಸಾ ಕಣ್ಣೀರು; ಏನಿದರ ಅಸಲಿಯತ್ತು?

0
1008

ಪ್ರಯಾಗ್‌ರಾಜ್‌ನಲ್ಲಿ ನಡೆದ 2025ರ ಕುಂಭಮೇಳದ ವೇಳೆ ರಾತ್ರೋರಾತ್ರಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಇದೀಗ ದೊಡ್ಡ ವಿವಾದಕ್ಕೆ ಕಾರಣರಾಗಿದ್ದಾರೆ. ಕೇರಳದ ಕೊಚ್ಚಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ಪತಿ ಫರ್ಮಾನ್ ಜೊತೆಗೂಡಿ, ತನ್ನ ಸಿನಿಮಾ ನಿರ್ದೇಶಕರಾದ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕೊಚ್ಚಿಯಲ್ಲಿ ನಡೆದ ಸುದ್ದಗೋಷ್ಠಿಯಲ್ಲಿ ಮೊನಾಲಿಸಾ ಮತ್ತು ಫರ್ಮಾನ್ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳಿಗೆ ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಅವರ ಪೋಸ್ಟರ್‌ಗಳನ್ನು ಸುಡುವಂತಹ ಘಟನೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮೊನಾಲಿಸಾ, ಸನೋಜ್ ಮಿಶ್ರಾ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದು,“ಅವರು ತುಂಬಾ ಕೆಟ್ಟ ಮತ್ತು ಅಸಹ್ಯಕರ ವ್ಯಕ್ತಿ. ಚಿತ್ರಗಳಲ್ಲಿ ಅವಕಾಶ ನೀಡುವ ನೆಪದಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಅವರ ಹೆಸರನ್ನು ಹೇಳಲು ನನಗೆ ನಾಚಿಕೆ ಆಗುತ್ತದೆ” ಎಂದು ಅವರು ಹೇಳಿದ್ದಾರೆ.

ಇದರ ಜೊತೆಗೆ, ತಮ್ಮ ವಿವಾಹದ ವಿಷಯದಲ್ಲಿಯೂ ತಪ್ಪು ಆರೋಪಗಳನ್ನು ಮಾಡಬಾರದು ಎಂದು ಮೊನಾಲಿಸಾ ಸರ್ಕಾರವನ್ನು ಒತ್ತಾಯಿಸಿದರು. “ನಾವು ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದೆವು. ಆದರೆ ಕೆಲವರು ಇದನ್ನು ಲವ್-ಜಿಹಾದ್ ಎಂದು ಕರೆಯುತ್ತಿದ್ದಾರೆ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ,” ಎಂದು ಅವರು ಸ್ಪಷ್ಟಪಡಿಸಿದರು.

“ನನ್ನನ್ನು ಫರ್ಮಾನ್‌ನಿಂದ ಬೇರ್ಪಡಿಸಲು ಯತ್ನಿಸಿದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಅವನಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ,” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ. ಇತ್ತೀಚೆಗೆ, ತಮ್ಮ ಕುಟುಂಬದ ವಿರೋಧದ ನಡುವೆಯೇ ಮೊನಾಲಿಸಾ ಕೇರಳದಲ್ಲಿ ಫರ್ಮಾನ್ ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿ ಚಿತ್ರೀಕರಣದ ನಿಮಿತ್ತ ತಿರುವನಂತಪುರಂಗೆ ಭೇಟಿ ನೀಡಿದ್ದರು. ಒಟ್ಟಿನಲ್ಲಿ ಮೊನಾಲಿಸಾ ಸುತ್ತಾ ನಡೆಯುತ್ತಿರೋ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.