Home Advertisement
Home ನಮ್ಮ ಜಿಲ್ಲೆ ಬೆಂಗಳೂರು 5 ವರ್ಷದ ಬಾಲ ಪ್ರತಿಭೆಯ ಅದ್ಭುತ ಸಾಧನೆ; 1 ನಿಮಿಷದಲ್ಲಿ ಶ್ಲೋಕ ಪಠಣೆ! ಹೊಯ್ಸಳ ಪ್ರಶಸ್ತಿ...

5 ವರ್ಷದ ಬಾಲ ಪ್ರತಿಭೆಯ ಅದ್ಭುತ ಸಾಧನೆ; 1 ನಿಮಿಷದಲ್ಲಿ ಶ್ಲೋಕ ಪಠಣೆ! ಹೊಯ್ಸಳ ಪ್ರಶಸ್ತಿ ವಿಜೇತ.

0
34

ಬಾಲ ಪ್ರತಿಭೆ ವಿಯಾನ್ಶ್ ದೇಶಪಾಂಡೆ ತನ್ನ ಅಸಾಧಾರಣ ಸಾಧನೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಹೊಯ್ಸಳ ಪ್ರಶಸ್ತಿಗೆ ಭಾಜನನಾಗಿದ್ದಾನೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವನಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಅಸಾಧಾರಣ ಸಾಧನೆ ಮಾಡಿದ ಬಾಲಕರಿಗೆ ಹೊಯ್ಸಳ ಪ್ರಶಸ್ತಿ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡುವುದು ಸರ್ಕಾರದ ಪರಿಪಾಠವಾಗಿದೆ.

ವಿಯಾನ್ಶ್ ದೇಶಪಾಂಡೆ ತನ್ನ ಎರಡು ವಿಶ್ವ ದಾಖಲೆಗಳ ಆಧಾರದ ಮೇಲೆ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ. ಕೇವಲ 1 ನಿಮಿಷದಲ್ಲಿ ಅತಿ ಹೆಚ್ಚು ಶ್ಲೋಕಗಳನ್ನು ಪಠಿಸುವುದು ಹಾಗೂ 1ರಿಂದ 10ರವರೆಗಿನ ಗುಣಾಕಾರ ಪಟ್ಟಿಗಳನ್ನು 2 ನಿಮಿಷ 43 ಸೆಕೆಂಡ್‌ಗಳಲ್ಲಿ ಹೇಳುವ ಸಾಧನೆ ಆ ಪುಟ್ಟ ಬಾಲಕ ಮಾಡಿದ್ದಾನೆ. ವಿಶೇಷವೆಂದರೆ, ಈ ಸಾಧನೆಯನ್ನು ಅವನು ಕೇವಲ 5 ವರ್ಷ 8 ತಿಂಗಳ ವಯಸ್ಸಿನಲ್ಲಿ ಸಾಧಿಸಿದ್ದಾನೆ.

ಪ್ರಶಸ್ತಿಯಾಗಿ ಪ್ರಮಾಣಪತ್ರ ಹಾಗೂ ರೂ.10,000 ನಗದು ಬಹುಮಾನ ನೀಡಲಾಗಿದೆ. ಪ್ರತಿ ವರ್ಷ ಸುಮಾರು 5ರಿಂದ 18 ವರ್ಷದೊಳಗಿನ 20 ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ ವಿಯಾನ್ಶ್ ಅವರ ತಂದೆ ಹರ್ಷ ದೇಶಪಾಂಡೆ ಹಾಗೂ ತಾಯಿ ಶೀತಲ್ ದೇಶಪಾಂಡೆ ಸೇರಿದಂತೆ ಕುಟುಂಬದವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.