ಮುಂಬೈ: ಬಾಲಿವುಡ್‌ನ ಎನರ್ಜೆಟಿಕ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಧುರಂಧರ್ 2’ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಈದ್ ಹಬ್ಬದ ಪ್ರಯುಕ್ತ ಮಾರ್ಚ್ 19ರಂದು ತೆರೆಕಂಡ ಈ ಸಿನಿಮಾ, ಕೇವಲ ಎರಡೇ ದಿನಗಳಲ್ಲಿ ಭಾರತೀಯ ಚಿತ್ರರಂಗದ ಹಳೆಯ ದಾಖಲೆಗಳನ್ನು ಪುಡಿಗಟ್ಟಿದೆ. ಭಾರತದಲ್ಲಿ ಈ ಚಿತ್ರ ಬರೋಬ್ಬರಿ 269 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ರಣವೀರ್ ವೃತ್ತಿಜೀವನದ ಅತಿದೊಡ್ಡ ‘ಬ್ಲಾಕ್ ಬಸ್ಟರ್’ ಆಗಿ ಹೊರಹೊಮ್ಮಿದೆ.
ಸಿನಿಮಾ ಪ್ರೇಮಿಗಳು ಮತ್ತು ವಿಮರ್ಶಕರು ಚಿತ್ರವನ್ನು ಕೊಂಡಾಡುತ್ತಿದ್ದಾರೆ. ಆದ್ರೆ ಈ ಸಂಭ್ರಮದ ನಡುವೆ ರಣವೀರ್ ಪತ್ನಿ, ಖ್ಯಾತ ನಟಿ ದೀಪಿಕಾ ಪಡುಕೋಣೆ ಮೌನ ಮಾತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪತಿಯ ಅತಿದೊಡ್ಡ ಯಶಸ್ಸಿನ ಬಗ್ಗೆ ದೀಪಿಕಾ ಯಾವುದೇ ಪೋಸ್ಟ್ ಹಂಚಿಕೊಳ್ಳದಿರುವುದು ಹಾಗೂ ಚಿತ್ರದ ಪ್ರೀಮಿಯರ್ ಶೋಗಳಲ್ಲಿ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎನ್ನಲಾಗುತ್ತಿದೆ.
ನೆಟ್ಟಿಗರು ಈ ಎಲ್ಲ ನಡುವಳಿಕೆಗೆ ಅನುಮಾನವನ್ನ ಹೊರಹಾಕುವುದಲ್ಲದೇ, ಯಾವ ಕಾರಣಕ್ಕೆ ಎಂಬುದರ ಬಗ್ಗೆ ತಮ್ಮಲ್ಲಿಯೇ ಈ ರೀತಿಯ ಪೆಶ್ನೆಗಳನ್ನ ಹುಟ್ಟು ಹಾಕಿಕೊಂಡಿದ್ದಾರೆ. ಸಿದ್ಧಾಂತಗಳ ಸಂಘರ್ಷವೇ? ಅಥವಾ ತಾಯ್ತನದ ಜವಾಬ್ದಾರಿಯೇ? ಎಂದು.
ವೈದಳಿಕ ಭಿನ್ನಾಭಿಪ್ರಾಯ: ‘ಧುರಂಧರ್ 2’ ಚಿತ್ರವು ಬಲಪಂಥೀಯ ಚಿಂತನೆಗಳನ್ನು ಪ್ರೇರೇಪಿಸುವ ಕಥಾಹಂದರ ಹೊಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ದೀಪಿಕಾ ಪಡುಕೋಣೆ ಈ ಹಿಂದೆ ಕೆಲವು ಎಡಪಂಥೀಯ ಸಿದ್ಧಾಂತಗಳ ಪರವಾಗಿ ನಿಂತಿದ್ದ ಇತಿಹಾಸವಿದೆ. ಈ ಸಿದ್ಧಾಂತಗಳ ಸಂಘರ್ಷದಿಂದಾಗಿಯೇ ಚಿತ್ರದ ಪ್ರಚಾರದಿಂದ ಅಥವಾ ಯಶಸ್ಸಿನ ಸಂಭ್ರಮದಿಂದ ದೂರ ಉಳಿದಿದ್ದಾರೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.
ತಾಯ್ತನದ ಆದ್ಯತೆ: ಮತ್ತೊಂದೆಡೆ, ದೀಪಿಕಾ ಇತ್ತೀಚೆಗಷ್ಟೇ ತಾಯಿಯಾಗಿದ್ದು, ಸದ್ಯ ತಮ್ಮ ಮಗುವಿನ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ನವಜಾತ ಶಿಶುವಿನ ಜವಾಬ್ದಾರಿ ಇರುವುದರಿಂದ ಸಾರ್ವಜನಿಕ ಸಮಾರಂಭಗಳಿಂದ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದಾರೆ ಎಂಬುದು ಅಭಿಮಾನಿಗಳ ವಾದವಾಗಿದೆ.
ಮೌನದ ಸುತ್ತ ಕುತೂಹಲ: ಬಾಲಿವುಡ್‌ನ ‘ಪವರ್ ಕಪಲ್’ ಎಂದೇ ಕರೆಸಿಕೊಳ್ಳುವ ದೀಪಿಕಾ-ರಣವೀರ್ ಸದಾ ಒಬ್ಬರನ್ನೊಬ್ಬರು ಬೆಂಬಲಿಸುತ್ತಾ ಬಂದವರು. ಹೀಗಿರುವಾಗ, ರಣವೀರ್ ವೃತ್ತಿ ಬದುಕಿನ ಈ ಮಹತ್ವದ ಘಟ್ಟದಲ್ಲಿ ದೀಪಿಕಾ ಪ್ರತಿಕ್ರಿಯೆ ಬಾರದಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಇದು ಕೇವಲ ಸಮಯದ ಅಭಾವವೋ ಅಥವಾ ವೈಯಕ್ತಿಕ ನಿರ್ಧಾರವೋ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಬೇಕಿದೆ.
ಒಟ್ಟಾರೆ ದೀಪಿಕಾ ಪಡುಕೋಣೆ ಬಹಳ ದಿನಗಳ ನಂತರ ಕ್ಲಾಸಿಕ್ ಲುಕ್‌ನಲ್ಲಿ ಮುಂಬೈನ ರಿಷಭ್ ಶರ್ಮಾ ಸಂಗೀತ ಕಚೇರಿಯಲ್ಲಿ ಭಾಗವಹಿ, ಸುಂದರ ಕ್ಷಣವನ್ನು ಕಳೆದಿದ್ದಾರೆ. ಈ ವೀಡಿಯೂ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.






















