Home Advertisement
Home ನಮ್ಮ ಜಿಲ್ಲೆ ಧಾರವಾಡ ಕಾಶ್ಮೀರದಂತಾದ ಕಲಘಟಗಿಗೆ ಜಿಲ್ಲಾಧಿಕಾರಿ ಭೇಟಿ

ಕಾಶ್ಮೀರದಂತಾದ ಕಲಘಟಗಿಗೆ ಜಿಲ್ಲಾಧಿಕಾರಿ ಭೇಟಿ

0
18

ಧಾರವಾಡ: ಭೀಕರವಾಗಿ ಸುರಿದ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಕಲಘಟಗಿ ಪಟ್ಟಣ ಸೇರಿದಂತೆ ಮಾಚಾಪೂರ, ಬೆಲವಂತರ ಗ್ರಾಮಗಳಿಗೆ ಮಂಗಳವಾರ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಭೇಟಿ ನೀಡಿ ಪರಿಶೀಲಿಸಿದರು.

ಅವರು ಬೆಲವಂತರ ಹಾಗೂ ಮಾಚಾಪೂರ ಗ್ರಾಮಗಳಿಗೆ ಭೇಟಿ ನೀಡುವುದರ ಜೊತೆಗೆ ಗ್ರಾಮಸ್ಥರೊಂದಿಗೆ ಹಾನಿಗೊಳಗಾದ ಜಮೀನುಗಳಿಗೆ ಹಾಗೂ ರೈತರ ಮನೆಗಳನ್ನು ಭೇಟಿ ನೀಡಿ ವೀಕ್ಷಿಸಿದರು. ಸರಕಾರದ ಗಮನಕ್ಕೆ ತರುವುದಲ್ಲದೆ ಶೀಘ್ರವಾಗಿ ಪರಿಹಾರ ದೊರಕುವಂತೆ ಮಾಡುವುದಾಗಿ ಸಂತ್ರಸ್ತರಿಗೆ ತಿಳಿಸಿದರು.

ಶಿಕ್ಷಕಿಯಾದ ಜಿಲ್ಲಾಧಿಕಾರಿ: ತಮ್ಮ ಬಹು ಆಸೆಯ ವೃತ್ತಿಯಾದ ಶಿಕ್ಷಕ ವೃತ್ತಿಯನ್ನು ಜಿಲ್ಲಾಧಿಕಾರಿಗಳು ತಾಲೂಕಿನ ಬೀರವಳ್ಳಿ ಗ್ರಾಮದ ಪಿ.ಎಂ. ಶ್ರೀ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ಹಿಂದಿ ವಿಷಯವನ್ನು ಭೋದಿಸುವುದರೊಂದಿಗೆ ಕಾಲ ಕಳೆದರು. ಮಕಳಿಂದ ಭವಿಷ್ಯತ್ತಿನಲ್ಲಿ ತಾವು ಸಾಧಿಸಬಹುದಾದ ಗುರಿಯ ಬಗ್ಗೆ ಚರ್ಚಿಸಿ ಶಾಲೆಯಲ್ಲಿ ಇರಬಹುದಾದ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿದರು.