Home Advertisement
Home ಆರೋಗ್ಯ ಬೇಸಿಗೆಯಲ್ಲಿ ದೇಹಕ್ಕೆ ಮಜ್ಜಿಗೆ ಉತ್ತಮವೇ? ಏನಿದರ ಪ್ರಯೋಜನೆಗಳು

ಬೇಸಿಗೆಯಲ್ಲಿ ದೇಹಕ್ಕೆ ಮಜ್ಜಿಗೆ ಉತ್ತಮವೇ? ಏನಿದರ ಪ್ರಯೋಜನೆಗಳು

0
51

ಈ ಉರಿಯುವ ಬಿಸಿಲಿನಲ್ಲಿ ಮನುಷ್ಯ ಹೆಚ್ಚು ಸುಸ್ತಾಗುತ್ತಾನೆ, ಅಲ್ಲದೇ ದಣಿದು ತಂಪು ಪಾನೀಯದ ಸೇವನೆಗೆ ಮುಂದಾಗುತ್ತಾನೆ. ಹೀಗೆ ಬೇಸಿಗೆಯಲ್ಲಿ ಹೊಟ್ಟೆಯನ್ನು ತಣ್ಣಗೆ ಇಟ್ಟುಕೊಳಲು ಕೋಲ್ಡ್ರಿಂಕ್ಸ್, ಐಸ್‌ಕ್ರೀಮ್‌, ಫ್ರಿಡ್ಜ್‌ನಲ್ಲಿನ ನೀರು ಇಂತಹವುಗಳನ್ನ ತಂಪು ಪಾನೀಯವೆಂದು ಕುಡಿಯುವುದು ಸೂಕ್ತವೇ? ಅಥವಾ ನೈಸರ್ಗಿಕವಾಗಿ ಹೊಟ್ಟೆ ತಂಪಾಗಿಸಲು ಯಾವ ತರಹದ ಪಾನೀಯ ಸೇವನೆ ಉತ್ತಮ ಎನ್ನುವುದನ್ನು ತಿಳಿಯಬೇಕೆ ಇಲ್ಲಿದೇ ಡಿಟೇಲ್ಸ್..‌

ಹೌದು ಬಿಸಿಲಿನ ವೇಳೆ ದೇಹ ತಂಪಾಗಿರಲು ನೀರು, ಇತರೆ ಪದಾರ್ಥಗಳನ್ನು ಕುಡಿಯುವುದುವು ಸಹಜ. ಹೀಗಾಗಿ ಈ ಬೇಸಿಗೆಯ ಸಮಯದಲ್ಲಿ ಮಜ್ಜಿಗೆ (Buttermilk)ಯನ್ನು ಕುಡಿಯುವುದು ಬಹಳ ಉತ್ತಮವಾದದು. ಇದು ದೇಹವನ್ನು ತಂಪಾಗಿರಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಅಲ್ಲದೇ ಮಜ್ಜಿಗೆಯನ್ನ ನಿಮ್ಮ ದಿನ ನಿತ್ಯದ ಊಟದ ನಂತರ ಅಥವಾ ಮಲಗುವ ಮುನ್ನ ಕುಡಿಯುವುದನ್ನು ರೂಢಿಸಿಕೊಂಡರೆ, ದೇಹದ ತೂಕ ಇಳಿಕೆ ಮತ್ತು ಅಸಿಡಿಟಿ ಕಡಿಮೆ ಮಾಡಲು ಅದ್ಭುತವಾದ ನೈಸರ್ಗಿಕ ಪಾನೀಯವಾಗಿ ಕೆಲಸ ಮಾಡುತ್ತದೆ. ಹಾಗೇ ಇದರಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಬಯಾಟಿಕ್‌ಗಳಿಂದ ಸಮೃದ್ಧವಾಗಿರುವುದರಿಂದ ಮಜ್ಜಿಗೆ ಮೂಳೆಗಳನ್ನು ಬಲಪಡಿಸುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

  • ಮಜ್ಜಿಗೆಯ ಸೇವನೆಯಿಂದ ಪ್ರಮುಖ ಉಪಯೋಗಗಳು:
    ಜೀರ್ಣಕ್ರಿಯೆ ಮತ್ತು ಅಸಿಡಿಟಿ: ಊಟದ ನಂತರ ಮಜ್ಜಿಗೆ ಕುಡಿಯುವುದರಿಂದ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ ಸಮಸ್ಯೆಗಳು ದೂರವಾಗುತ್ತವೆ.
    ದೇಹ ತಂಪಾಗುವಿಕೆ: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಿದ (Hydrated) ಮತ್ತು ತಂಪಾಗಿರಿಸಲು ಮಜ್ಜಿಗೆ ಅತ್ಯುತ್ತಮವಾಗಿದೆ.
    ತೂಕ ನಿರ್ವಹಣೆ: ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶವನ್ನು ಹೊಂದಿರುವುದರಿಂದ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
    ಪೋಷಕಾಂಶಗಳ ಆಗರ: ವಿಟಮಿನ್ B, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಪ್ರೋಟೀನ್‌ನಿಂದ ಸಮೃದ್ಧವಾಗಿದೆ.
    ಚರ್ಮದ ಆರೈಕೆ: ಮಜ್ಜಿಗೆಯಲ್ಲಿನ ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ಸ್ವಚ್ಛಗೊಳಿಸಲು (Cleanser) ಸಹಾಯ ಮಾಡುತ್ತದೆ.

ಮಜ್ಜಿಗೆಯನ್ನ ಆರೋಗ್ಯದ ಪ್ರಮುಖ ಮತ್ತು ಉತ್ತಮವಾದ ಪಾನೀಯವೆಂದು ಪರಿಗಣಿಸಲಾಗುತ್ತದೆ. ಇದರಿಂದ ಬೆಣ್ಣೆ ತಯಾರಿಕೆಯ ಈ ಉಪ-ಉತ್ಪನ್ನವು ಒಂದು ಫ್ರೆಶ್‌ ಡೈರಿ ಪದಾರ್ಥವನ್ನು ಸೇವಿಸುವುದು ಒಳ್ಳೆಯದು. ಮಜ್ಜಿಗೆ ಹುಳಿ ಮತ್ತು ಕಟುವಾದ ಅಂಶವನ್ನು ಹೊಂದಿದ್ದು, ಇದರಿಂದ ಬಾಯಿಯ ರುಚಿ ಅಷ್ಟೇ ಅಲ್ಲದೇ, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ.