Home Advertisement
Home ನಮ್ಮ ಜಿಲ್ಲೆ ಕೊಪ್ಪಳ ಹಾಸ್ಟೆಲ್‌ನಲ್ಲಿ ಗ್ಯಾಸ್‌ ಟ್ರಬಲ್: ಹೋಟೆಲ್ ಮೊರೆಹೋದ ವಿದ್ಯಾರ್ಥಿಗಳು

ಹಾಸ್ಟೆಲ್‌ನಲ್ಲಿ ಗ್ಯಾಸ್‌ ಟ್ರಬಲ್: ಹೋಟೆಲ್ ಮೊರೆಹೋದ ವಿದ್ಯಾರ್ಥಿಗಳು

0
3

ಕೊಪ್ಪಳ: ನಗರದ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ(ಕಿಮ್ಸ್) ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಮರ್ಷಿಯಲ್ ಸಿಲಿಂಡರ್ ಅಭಾವದ ಪರಿಣಾಮ ತಟ್ಟಿದ್ದು, ಗುರುವಾರ ಮಧ್ಯಾಹ್ನದ ಊಟಕ್ಕೆ ಪರದಾಡಿದ ಘಟನೆ ನಡೆದಿದೆ.

360 ವಿದ್ಯಾರ್ಥಿಗಳನ್ನು ಹೊಂದಿರುವ ಕಿಮ್ಸ್ ವಸತಿನಿಲಯದಲ್ಲಿ ಸಿಲಿಂಡರ್ ಕೊರತೆಯಿಂದ ಮಧ್ಯಾಹ್ನ ಅಡುಗೆಕೋಣೆ ಬಂದ್ ಮಾಡಲಾಯಿತು. ಬೆಳಿಗ್ಗೆಯ ಉಪಹಾರ ತಯಾರಿಸಲು ಮಾತ್ರ ಸಿಲಿಂಡರ್ ಲಭ್ಯವಿದ್ದು, ಊಟ ತಯಾರಿಕೆಗೆ ಕೊರತೆಯಾಯಿತು.

ಈ ಹಿನ್ನಲೆ ವಸತಿನಿಲಯದ ವಿದ್ಯಾರ್ಥಿಗಳು ಹೋಟೆಲ್ ಮತ್ತು ಖಾನಾವಳಿಗೆ ಹೋಗಿ ಹೊಟ್ಟೆ ತುಂಬಿಸಿಕೊಂಡರು. ಸಂಜೆ ವೇಳೆಗೆ ಸಿಲಿಂಡರ್ ಸಮಸ್ಯೆ ಪರಿಹಾರವಾಯಿತು.

ಮಾಹಿತಿ ಬಂದ ತಕ್ಷಣ ಜಿಲ್ಲಾಧಿಕಾರಿ ಜೊತೆ ಮಾತನಾಡಿ, ಸಮಸ್ಯೆ ಪರಿಹರಿಸಿದ್ದೇನೆ. ಸಂಜೆ ಸಿಲಿಂಡರ್ ಲಭಿಸಿವೆ ಎಂದು ಕಿಮ್ಸ್ ನಿರ್ದೇಶಕ ಡಾ. ವಿಜಯನಾಥ ಇಟಗಿ ತಿಳಿಸಿದ್ದಾರೆ.