Home Advertisement
Home ಸಿನಿ ಮಿಲ್ಸ್ ಮಹಾಕುಂಭಮೇಳದ ‘ಕಣ್ಣಿನ ಸುಂದರಿ’ ಈಗ ವಿವಾದದ ಸುಳಿಯಲ್ಲಿ: ಇದು ಪ್ರೇಮವೋ ?, ಕೇರಳ ಸ್ಟೋರಿ’ ಮಾದರಿಯ...

ಮಹಾಕುಂಭಮೇಳದ ‘ಕಣ್ಣಿನ ಸುಂದರಿ’ ಈಗ ವಿವಾದದ ಸುಳಿಯಲ್ಲಿ: ಇದು ಪ್ರೇಮವೋ ?, ಕೇರಳ ಸ್ಟೋರಿ’ ಮಾದರಿಯ ಸಂಚೋ?

0
127

ತಿರುವನಂತಪುರ: ಕಳೆದ ವರ್ಷ ಪ್ರಯಾಗ್‌ರಾಜ್‌ನ ಪವಿತ್ರ ಮಹಾಕುಂಭಮೇಳದ ಮರಳಿನ ಮೇಲೆ, ಕೈಯಲ್ಲಿ ರುದ್ರಾಕ್ಷಿ ಮತ್ತು ಹೂಮಾಲೆಗಳನ್ನು ಹಿಡಿದು, ಮುಗ್ಧ ನಗುವಿನಿಂದ ಕೋಟ್ಯಂತರ ಭಾರತೀಯರ ಮನಗೆದ್ದಿದ್ದ ‘ಕುಂಭಮೇಳದ ಹುಡುಗಿ’ ಮೊನಾಲಿಸಾ ಭೋಸ್ಥೆ. ಈಗ ದೇಶಾದ್ಯಂತ ಭಾರಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕೇವಲ 18 ವರ್ಷದ ಈ ಯುವತಿ ಸದ್ದಿಲ್ಲದೆ ಕೇರಳದ ದೇವಸ್ಥಾನವೊಂದರಲ್ಲಿ ಮುಸ್ಲಿಂ ಯುವಕನೊಂದಿಗೆ ಮದುವೆಯಾಗಿರುವುದು ಈಗ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಫೇಸ್‌ಬುಕ್ ಪ್ರೇಮ ಮತ್ತು ‘ದಿ ಕೇರಳ ಸ್ಟೋರಿ’: ಮೂಲತಃ ಮಧ್ಯಪ್ರದೇಶದ ಇಂದೋರ್‌ನವರಾದ ಮೊನಾಲಿಸಾ, ಮಹಾರಾಷ್ಟ್ರದ ಫರ್ಮಾನ್ ಖಾನ್ ಎಂಬಾತನನ್ನು ವಿವಾಹವಾಗಿದ್ದಾಳೆ. ಮಾಹಿತಿಯ ಪ್ರಕಾರ ಇವರ ಪರಿಚಯವಾಗಿದ್ದು ಕೇವಲ ಆರು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ, ಪವಿತ್ರ ಕುಂಭಮೇಳದ ಸಂಕೇತದಂತಿದ್ದ ಹುಡುಗಿ ಇಷ್ಟು ಬೇಗ ಅನ್ಯಧರ್ಮದ ಯುವಕನ ಪ್ರೇಮಪಾಶಕ್ಕೆ ಸಿಲುಕಿದ್ದು ಹೇಗೆ ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇದನ್ನು ಅನೇಕರು ‘ದಿ ಕೇರಳ ಸ್ಟೋರಿ’ ಸಿನಿಮಾದ ವಾಸ್ತವ ರೂಪ ಎಂದು ಬಣ್ಣಿಸುತ್ತಿದ್ದಾರೆ.

ತಂದೆಯ ಕಣ್ಣೀರು, ಪೊಲೀಸ್ ಠಾಣೆ ಮೆಟ್ಟಿಲೇರಿದ ಹೈಡ್ರಾಮಾ: ಮೊನಾಲಿಸಾ ತಂದೆ ಜೈ ಸಿಂಗ್ ಭೋಸ್ಥೆ ಈ ಮದುವೆಯನ್ನು ತೀವ್ರವಾಗಿ ವಿರೋಧಿಸಿದ್ದರು. ತನ್ನ ಮಗಳನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಅಥವಾ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.ನಂತರ ಅಲ್ಲಿಂದ ಕರೆದೊಯ್ಯಲು ಕೇರಳದ ಶೂಟಿಂಗ್ ಸ್ಪಾಟ್‌ಗೆ ಧಾವಿಸಿದ್ದರು.

ಆದ್ರೆ ಮೊನಾಲಿಸಾ ತನ್ನ ತಂದೆಯ ವಿರುದ್ಧವೇ ಪೊಲೀಸ್ ದೂರು ನೀಡಿ, ತಾನು ಫರ್ಮಾನ್ ಜೊತೆಗೇ ಇರುವುದಾಗಿ ಪಟ್ಟು ಹಿಡಿದರು. ಕಾನೂನಿನ ಪ್ರಕಾರ 18 ವರ್ಷ ತುಂಬಿರುವುದರಿಂದ ಪೊಲೀಸರು ತಂದೆಯನ್ನು ಅಸಹಾಯಕರನ್ನಾಗಿ ಮಾಡಿ ಕಳುಹಿಸಿಕೊಟ್ಟಿದ್ದಾರೆ.

ರಾಜಕೀಯ ನಾಯಕರ ಉಪಸ್ಥಿತಿ: ಉರಿಯುವ ಬೆಂಕಿಗೆ ತುಪ್ಪ!: ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿರುವುದು ಕೇರಳದ ರಾಜಕೀಯ ಗಣ್ಯರ ನಡೆ. ಈ ಅಂತರ್ಧರ್ಮೀಯ ವಿವಾಹದಲ್ಲಿ ಕೇರಳದ ಶಿಕ್ಷಣ ಸಚಿವ ವಿ. ಶಿವಶೆಟ್ಟಿ ಮತ್ತು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. “ಹಿಂದೂ ಧರ್ಮದ ಪವಿತ್ರ ಮಾಲೆಗಳನ್ನು ಮಾರುತ್ತಿದ್ದ ಹುಡುಗಿಯ ಮದುವೆಗೆ ಎಡಪಂಥೀಯ ನಾಯಕರು ಬೆಂಬಲ ನೀಡುತ್ತಿರುವುದು ಒಂದು ನಿರ್ದಿಷ್ಟ ಅಜೆಂಡಾದ ಭಾಗವೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಸಿನಿಮಾ ರಂಗದ ಎಂಟ್ರಿ ಮತ್ತು ಅಸಲಿ ಆತಂಕ: ಪ್ರಸ್ತುತ ಮೊನಾಲಿಸಾ ‘ನಾಗಮ್ಮ’ ಮತ್ತು ‘ದಿ ಡೈರಿ ಆಫ್ ಮಣಿಪುರ್’ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಒಂದು ಕಡೆ ಇದು ಕೇವಲ ಪ್ರಚಾರಕ್ಕಾಗಿ ನಡೆದ ಗಿಮಿಕ್ ಎಂಬ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸಾವಿರಾರು ವರ್ಷಗಳ ಸನಾತನ ಸಂಪ್ರದಾಯದ ಭಾಗವಾಗಿದ್ದ ಹುಡುಗಿಯೊಬ್ಬಳು ಹೀಗೆ ದಿಢೀರ್ ನಿರ್ಧಾರ ತೆಗೆದುಕೊಂಡಿರುವುದು ಹಿಂದೂ ಧರ್ಮೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಒಟ್ಟಾರೆ.. ಕುಂಭಮೇಳದ ಆ ಮುಗ್ಧ ಮುಖದ ಹಿಂದೆ ಇಷ್ಟೊಂದು ದೊಡ್ಡ ವಿವಾದ ಅಡಗಿದೆ ಎಂದು ಯಾರೂ ಊಹಿಸಿರಲಿಲ್ಲ. ಈ ಮದುವೆ ಸುಖಾಂತ್ಯ ಕಾಣುತ್ತದೆಯೇ ಅಥವಾ ಮತ್ತೊಂದು ವಿವಾದಾತ್ಮಕ ಇತಿಹಾಸಕ್ಕೆ ನಾಂದಿ ಹಾಡುತ್ತದೆಯೇ? ಕಾದು ನೋಡಬೇಕಿದೆ.