ಬೆಳಗಾವಿ(ಎಂ.ಕೆ. ಹುಬ್ಬಳ್ಳಿ): ಇಲ್ಲಿನ ಮಲಪ್ರಭಾ ನದಿಗೆ ಹಾರಿ ಬೆಳಗಾವಿಯ ಜೈಲ್ ವಾರ್ಡರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದ ನಿವಾಸಿ ವಿನೋದ ಭೀಮಪ್ಪ ತಿಗಡಿ (31) ಮೃತ ವ್ಯಕ್ತಿ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಜೈಲ್ ವಾರ್ಡರ್ ಆಗಿ ಸೇವೆ ಸಲ್ಲಿಸುತ್ತಿದ್ದ.
ಇತ್ತಿಚೆಗೆ ಹೊಸ ಮನೆ ನಿರ್ಮಿಸಿದ್ದರು. ಉತ್ತಮ ಸ್ವಭಾವ ಹೊಂದಿದ್ದ ಇವರು ಮದುವೆ ಆಗಲು ಹೆಣ್ಣು ಹುಡುಕುತ್ತಿದ್ದರು. ಆದರೆ, ಹೆಣ್ಣು ಸಿಗದಿದ್ದರಿಂದ ಮಾನಸಿಕವಾಗಿ ಜಿಗುಪ್ಸೆಗೊಂಡು ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.























