Home Advertisement
Home ನಮ್ಮ ಜಿಲ್ಲೆ ರಾಯಚೂರು ಬೆಂಗಳೂರು–ಮುಂಬೈ ನಡುವೆ ಒನ್‌ವೇ ವಿಶೇಷ ರೈಲು ಸಂಚಾರ

ಬೆಂಗಳೂರು–ಮುಂಬೈ ನಡುವೆ ಒನ್‌ವೇ ವಿಶೇಷ ರೈಲು ಸಂಚಾರ

0
115

ಬೆಂಗಳೂರಿನಿಂದ ಎಲ್.ಟಿ.ಟಿ ಗೆ ಏಕಮುಖ ವಿಶೇಷ ರೈಲು ಸಂಚಾರ

ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ನೈಋತ್ಯ ರೈಲ್ವೆಯು ವಿಶೇಷ ಕ್ರಮ ಕೈಗೊಂಡಿದ್ದು, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್(ಎಸ್‌ಎಂವಿಟಿ) ನಿಲ್ದಾಣದಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ (ಎಲ್‌ಟಿಟಿ) ವರೆಗೆ ಮಾರ್ಚ್ 1ರಂದು ಒನ್‌ವೇ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ.

ರೈಲು ಸಂಚಾರ ವಿವರ: ರೈಲು ಸಂಖ್ಯೆ 06541 ಎಸ್‌ಎಂವಿಟಿ ಬೆಂಗಳೂರು–ಎಲ್‌ಟಿಟಿ ಏಕಮುಖ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 1ರಂದು ಸಂಜೆ 7 ಗಂಟೆಗೆ ಎಸ್‌ಎಂವಿಟಿ ನಿಲ್ದಾಣದಿಂದ ಹೊರಡಲಿದ್ದು ಮರುದಿನ ರಾತ್ರಿ 11.30ಕ್ಕೆ ಎಲ್‌ಟಿಟಿ ನಿಲ್ದಾಣ ತಲುಪಲಿದೆ.

ಇದನ್ನೂ ಓದಿ: ಹುಬ್ಬಳ್ಳಿ – ಪುಣೆ ನಡುವೆ ಏಕಮುಖ ವಿಶೇಷ ರೈಲು ಸಂಚಾರ

ಮಧ್ಯಂತರ ನಿಲ್ದಾಣಗಳು: ಈ ವಿಶೇಷ ರೈಲು ಕೆಳಗಿನ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ:

ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ಲೋನಾವಾಲಾ ಹಾಗೂ ಕಲ್ಯಾಣ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ಇದನ್ನೂ ಓದಿ: ರಾಯಚೂರಿನಲ್ಲಿ ಭೀಕರ ಅಪಘಾತ: ಮೂವರು ಯುವಕರ ದುರ್ಮರಣ

ಬೋಗಿಗಳ ಮಾಹಿತಿ: ಈ ರೈಲಿನಲ್ಲಿ ಒಟ್ಟು 19 ಬೋಗಿಗಳಿರಲಿವೆ. 15 ಸಾಮಾನ್ಯ ದ್ವಿತೀಯ ದರ್ಜೆ (General Second Class) ಬೋಗಿಗಳು, 2 ಎಸ್‌ಎಲ್‌ಆರ್ (SLR) ಬೋಗಿಗಳು, 2 ಎಸಿ ಬೋಗಿಗಳು (ಲಾಕ್ ಮಾಡಲ್ಪಟ್ಟಿದ್ದು, ಪ್ರಯಾಣಿಕರಿಗೆ ಲಭ್ಯವಿರುವುದಿಲ್ಲ) ಇದು ಸಂಪೂರ್ಣ ಕಾಯ್ದಿರಿಸದ (Unreserved) ರೈಲಾಗಿದ್ದು, ಪ್ರಯಾಣಿಕರು ನಿಲ್ದಾಣದ ಟಿಕೆಟ್ ಕೌಂಟರ್ ಅಥವಾ ಅಧಿಕೃತ ರೈಲ್ವೆ ಮೊಬೈಲ್ ಆ್ಯಪ್ ‘ರೈಲ್ಒನ್’ ಮೂಲಕ ಟಿಕೆಟ್ ಪಡೆದು ಪ್ರಯಾಣಿಸಬಹುದು.

ಪ್ರಯಾಣಿಕರು ಮುಂಚಿತವಾಗಿ ನಿಲ್ದಾಣಕ್ಕೆ ಆಗಮಿಸಿ ಟಿಕೆಟ್ ಪಡೆಯುವಂತೆ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.