Home Advertisement
Home ನಮ್ಮ ಜಿಲ್ಲೆ ಯಾದಗಿರಿ ವೈರಲ್ ವಿಡಿಯೋ ಶಾಕ್: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಆಯೋಗ ದೂರು

ವೈರಲ್ ವಿಡಿಯೋ ಶಾಕ್: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಆಯೋಗ ದೂರು

0
144

ಸ್ವಯಂ ಘೋಷಿತ ದೇವ ಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಮಕ್ಕಳ ಆಯೋಗ ದೂರು ದಾಖಲು

ಯಾದಗಿರಿ: ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ, ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಸ್ವಯಂ ಘೋಷಿತ ದೇವಮಾನವನೆಂದೇ ಪರಿಚಿತನಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ತುಣುಕಿನಲ್ಲಿ, ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ನಡೆಸಿರುವ ದೃಶ್ಯಗಳಿವೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆಯೋಗವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಸೂಚಿಸಿದೆ.

ಇದನ್ನೂ ಓದಿ: ಹೋಳಿ ವಿಶೇಷ: ಹುಬ್ಬಳ್ಳಿ–ಮುಜಾಫರ್‌ಪುರ ನಡುವೆ ವಿಶೇಷ ರೈಲು

ಆಯೋಗವು ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದು, ವೈರಲ್ ಆಗಿರುವ ವಿಡಿಯೋ ತುಣುಕುಗಳ ಪರಿಶೀಲನೆ ನಡೆಸಿ, ಕೈಗೊಂಡ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಪ್ರಕರಣದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಆಯೋಗ ತಿಳಿಸಿದೆ.

ಯಾರು ಮಲ್ಲಿಕಾರ್ಜುನ ಮುತ್ಯಾ?: ಮಲ್ಲಿಕಾರ್ಜುನ ಮುತ್ಯಾ (26-27 ವರ್ಷ) ಕಳೆದ ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಾದ Instagram, YouTube ಹಾಗೂ Facebook ಮೂಲಕ ಮುನ್ನೆಲೆಗೆ ಬಂದಿದ್ದರು. ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ನಿವಾಸಿಯಾಗಿರುವ ಅವರು, ತಮ್ಮನ್ನು ಸ್ವಯಂ ಘೋಷಿತ ದೇವಮಾನವನಾಗಿ ಪರಿಚಯಿಸಿಕೊಂಡು ಭಕ್ತರನ್ನು ಸೆಳೆದಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ: ರಣಜಿ ಫೈನಲ್‌ನಲ್ಲಿ ಗಲಾಟೆ – ಮೈದಾನದಲ್ಲೇ ಕರ್ನಾಟಕದ ಆಟಗಾರನಿಗೆ ಡಿಚ್ಚಿ

ಭಕ್ತರ ಮನದಲ್ಲಿರುವ ವಿಚಾರಗಳನ್ನು ಮುಖದ ಮೇಲೆ ಹೇಳುವ ವಾಕ್ಚಾತುರ್ಯ ಮತ್ತು ಧಾರ್ಮಿಕ ವ್ಯಾಖ್ಯಾನಗಳ ಮೂಲಕ ಅವರು ಗಮನ ಸೆಳೆದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದ ಅವರು, ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದಾರೆ.

ಪ್ರಕರಣದ ಸಂಬಂಧವಾಗಿ ಪೊಲೀಸ್ ಇಲಾಖೆ ಪರಿಶೀಲನೆ ನಡೆಸಿ, ಆಯೋಗಕ್ಕೆ ವರದಿ ಸಲ್ಲಿಸಬೇಕಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ಸಂಬಂಧಿಸಿದ ಪ್ರಕರಣಗಳ ಕುರಿತು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಆಯೋಗದ ಸ್ಪಷ್ಟ ನಿಲುವಾಗಿದೆ.

Previous articleಹೋಳಿ ವಿಶೇಷ: ಹುಬ್ಬಳ್ಳಿ–ಮುಜಾಫರ್‌ಪುರ ನಡುವೆ ವಿಶೇಷ ರೈಲು
Next articleಕಾರ್ಕಳ: ವೈಚಾರಿಕತೆ–ವೈಜ್ಞಾನಿಕತೆ ಶಿಕ್ಷಣದ ಅಗತ್ಯ- ಸಿಎಂ