Home Advertisement
Home ಕ್ರೀಡೆ ಹುಬ್ಬಳ್ಳಿ: ರಣಜಿ ಫೈನಲ್‌ನಲ್ಲಿ ಗಲಾಟೆ – ಮೈದಾನದಲ್ಲೇ ಕರ್ನಾಟಕದ ಆಟಗಾರನಿಗೆ ಡಿಚ್ಚಿ

ಹುಬ್ಬಳ್ಳಿ: ರಣಜಿ ಫೈನಲ್‌ನಲ್ಲಿ ಗಲಾಟೆ – ಮೈದಾನದಲ್ಲೇ ಕರ್ನಾಟಕದ ಆಟಗಾರನಿಗೆ ಡಿಚ್ಚಿ

0
122

ಹುಬ್ಬಳ್ಳಿಯಲ್ಲಿ ರಣಜಿ ಫೈನಲ್‌ನಲ್ಲಿ ಗಲಾಟೆ: ಮೈದಾನದಲ್ಲೇ ಡಿಕ್ಕಿ ಹೊಡೆದ ವಿಡಿಯೋ ವೈರಲ್‌

ಹುಬ್ಬಳ್ಳಿ: ನಗರದ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2025–26ರ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಎರಡನೇ ದಿನದಾಟದ ವೇಳೆ ಮೈದಾನದಲ್ಲೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಹಾಗೂ ಕರ್ನಾಟಕದ ಫೀಲ್ಡರ್ ಅನೀಶ್ ಕೆವಿ ನಡುವೆ ಜಗಳ ನಡೆದಿದೆ.

ಹೇಗೆ ಆರಂಭವಾಯಿತು ಘಟನೆ?: ಜಮ್ಮು ಮತ್ತು ಕಾಶ್ಮೀರದ ಇನ್ನಿಂಗ್ಸ್‌ನ 100ನೇ ಓವರ್‌ನಲ್ಲಿ, ಪ್ರಸಿದ್ಧ್ ಕೃಷ್ಣ ಎಸೆತವನ್ನು ಪರಾಸ್ ಡೋಗ್ರಾ ಗಲ್ಲಿ ದಿಕ್ಕಿನಲ್ಲಿ ಆಡಿದರು. ಫೀಲ್ಡರ್ ಡೈವ್ ಮಾಡಿದರೂ ಚೆಂಡು ಬೌಂಡರಿ ದಾಟಿತು. ಇದೇ ವೇಳೆ ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅನೀಶ್ ಕೆವಿ ಮತ್ತು ಡೋಗ್ರಾ ನಡುವೆ ಮಾತಿನ ಚಕಮಕಿ ಆರಂಭವಾಯಿತು.

ಇದನ್ನೂ ಓದಿ: ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅಗ್ನಿ ಅವಘಡ

ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಡೋಗ್ರಾ ಅನೀಶ್ ಅವರ ತಲೆಗೆ ಡಿಕ್ಕಿ ಹೊಡೆದಿರುವುದು ಮೈದಾನದಲ್ಲೇ ಉದ್ವಿಗ್ನತೆ ಹೆಚ್ಚಿಸಿತು. ಕೆಲವು ಕ್ಷಣಗಳ ಕಾಲ ಆಟ ಸ್ಥಗಿತಗೊಂಡಿತು.

ಮಾಯಾಂಕ್ ಅಗರ್ವಾಲ್ ಮಧ್ಯಪ್ರವೇಶ: ಈ ವೇಳೆ ಕರ್ನಾಟಕದ ಮಾಜಿ ನಾಯಕ ಮಾಯಾಂಕ್ ಅಗರ್ವಾಲ್ ಮಧ್ಯಪ್ರವೇಶಿಸಿ ಡೋಗ್ರಾ ಜೊತೆ ವಾಗ್ವಾದ ನಡೆಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಯತ್ನಿಸಿದರು. ಆದರೆ ಕೆಲಕಾಲ ವಾದ ಮುಂದುವರಿದಿತು. ಕೊನೆಗೆ ಅಂಪೈರ್‌ಗಳು ಮಧ್ಯಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಿದರು.

ಇದನ್ನೂ ಓದಿ: ಲಂಚ ಪ್ರಕರಣ: ಗಣಿ ಉಪನಿರ್ದೇಶಕ ಬಂಧನ – ದಾಳಿಯಲ್ಲಿ ₹4 ಕೋಟಿಗೂ ಹೆಚ್ಚು ನಗದು ಪತ್ತೆ

ಘಟನೆಯ ಬಳಿಕ ಅಂಪೈರ್‌ಗಳು ಕರ್ನಾಟಕದ ನಾಯಕ ದೇವದತ್ ಪಡಿಕ್ಕಲ್ ಅವರೊಂದಿಗೆ ಮಾತನಾಡಿ, ಫೀಲ್ಡಿಂಗ್ ತಂಡ ಶಿಸ್ತು ಪಾಲಿಸುವಂತೆ ಸೂಚಿಸಿದರು.

ಪಂದ್ಯಾವಳಿಯ ಸ್ಥಿತಿ: ಈ ಘಟನೆಯ ನಡುವೆಯೂ ಪಂದ್ಯ ಮುಂದುವರಿದಿದ್ದು, ಎರಡೂ ತಂಡಗಳು ಕಪ್ ಗೆಲ್ಲುವ ಉತ್ಸಾಹದಲ್ಲಿ ತೀವ್ರ ಪೈಪೋಟಿ ನಡೆಸುತ್ತಿವೆ. ರಣಜಿ ಫೈನಲ್‌ನಂತಹ ಮಹತ್ವದ ಪಂದ್ಯದಲ್ಲಿ ಇಂತಹ ಘಟನೆಗಳು ಕ್ರೀಡಾ ಆತ್ಮೀಯತೆಯ ಮೇಲೆ ಪ್ರಶ್ನೆ ಎಬ್ಬಿಸಿದ್ದರೂ, ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದು ಗಮನಾರ್ಹ.

ಇದನ್ನೂ ಓದಿ: ಮಕ್ಕಳ ರಕ್ಷಣೆ: ಅಸಭ್ಯ ವಿಷಯ ಪ್ರಸಾರ ಮಾಡಿದ 5 OTTಗಳು ಬ್ಯಾನ್

ಎರಡನೇ ದಿನದಾಟದ ಅಂತ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 527 ರನ್ ಗಳಿಸಿದೆ.

ಕರ್ನಾಟಕದ ಬೌಲಿಂಗ್: ಕರ್ನಾಟಕದ ಪರವಾಗಿ ಪ್ರಸಿದ್ಧ್ ಕೃಷ್ಣ ಇದುವರೆಗೆ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ವಿದ್ಯಾಧರ್ ಪಾಟೀಲ್ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: ಮಕ್ಕಳ ಭವಿಷ್ಯ vs ಡಿಜಿಟಲ್ ಯುಗ: ಮೊಬೈಲ್ ಬಳಕೆಗೆ ಮಿತಿ ಬೇಕೇ?

ಪಂದ್ಯ ಸ್ಥಗಿತ: ಮಂದಬೆಳಕು ಮತ್ತು ಮಳೆಯ ಕಾರಣದಿಂದಾಗಿ ಎರಡನೇ ದಿನದ ಆಟವನ್ನು ಬೇಗನೇ ಮುಕ್ತಾಯಗೊಳಿಸಲಾಯಿತು.

Previous articleಕಾರ್ಮಿಕರ ಬೇಡಿಕೆ ಈಡೇರಿಕೆಗೆ BMS ಪ್ರತಿಭಟನೆ: ಪ್ರಧಾನಮಂತ್ರಿಗೆ ಮನವಿ
Next articleಹೋಳಿ ವಿಶೇಷ: ಹುಬ್ಬಳ್ಳಿ–ಮುಜಾಫರ್‌ಪುರ ನಡುವೆ ವಿಶೇಷ ರೈಲು