ಮುಂಬೈ: ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ 107 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಪಡೆ ಪವರ್ ಪ್ಲೇನಲ್ಲಿ 35 ಎಸೆತಗಳಲ್ಲಿ 2 ವಿಕೆಟ್ ನಷ್ಟಕ್ಕೆ 54 ರನ್ ಕಲೆ ಹಾಕಿತ್ತು. ನಂತರ ಬಂದ ಶಿಮ್ರಾನ್ ಹೆಟ್ಮಾಯೆರ್ 19 ಎಸೆತಗಳಲ್ಲಿ 5 ಸಿಕ್ಸರ್, 4 ಬೌಂಡರಿ ಸೇರಿ 50 ಅರ್ಧಶತಕ ಪೂರೈಸಿದರು. ಅಂತಿಮವಾಗಿ ಕೇವಲ 34 ಎಸೆತಗಳಲ್ಲಿ 7 ಸಿಕ್ಸರ್, 7 ಬೌಂಡರಿಯೊಂದಿಗೆ 85 ರನ್ ದಾಖಲಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದು 14.3 ಓವರ್‌ನಲ್ಲಿ ಕ್ರೆಮೆರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಲಾಂಗ್ ಆನ್ ಫೀಲ್ಡ್‌ನಲ್ಲಿದ್ದ ಬೆನ್ನೆತ್‌ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.
ಇನ್ನೂ ವಿಂಡೀಸ್ ಪರ ಹೆಟ್ಮಾಯೆರ್ ಹಾಗೂ ರೋಮನ್ ಪೊವೆಲ್ 3ನೇ ವಿಕೆಟ್‌ಗೆ 20 ಎಸೆತಗಳಲ್ಲಿ 50 ರನ್ ಸಿಡಿಸಿದರೇ, ಇದೇ ಜೋಡಿ 45 ಎಸೆತಗಳಲ್ಲಿ 100 ರನ್ ಜತೆಯಾಟವಾಡಿತು. ಅಂತಿಮವಾಗಿ 20 ಓವರ್‌ಗೆ 6 ವಿಕೆಟ್ ಕಳೆದುಕೊಂಡು 254 ರನ್ ದಾಖಲಿಸಿತು.
ಇದನ್ನೂ ಓದಿ: ದರ್ಶನ್ ಗನ್ ಲೈಸೆನ್ಸ್ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
255 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಜಿಂಬಾಬ್ವೆ ಆರಂಭಿಕ ಆಘಾತ ಎದುರಿಸಿತು. ಜಿಂಬಾಬ್ವೆ ಪರ ಬ್ರಾಡ್ ಎವೆನ್ಸ್ 21 ಎಸೆತಗಳಲ್ಲಿ 43 ರನ್ ಸಿಡಿಸಿ ತಂಡದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಅಂತಿಮವಾಗಿ ಜಿಂಬಾಬ್ವೆ 17.4 ಓವರ್‌ಗಳಲ್ಲಿ 147 ರನ್‌ಗಳಿಗೆ ಸರ್ವಪತನ ಕಂಡಿದ್ದು, 107 ರನ್‌ಗಳ ಅಂತರದಲ್ಲಿ ಸೋಲೋಪ್ಪಿಕೊಂಡಿತು.























