Home Advertisement
Home ಸುದ್ದಿ ರಾಜ್ಯ ವೈದ್ಯಕೀಯ ಸೇವೆ ಬಂದ್: 2 ಹಂತದ ಮುಷ್ಕರ ಘೋಷಣೆ

ವೈದ್ಯಕೀಯ ಸೇವೆ ಬಂದ್: 2 ಹಂತದ ಮುಷ್ಕರ ಘೋಷಣೆ

0
60

ಮಾರ್ಚ್ 11ರಿಂದ ಓಪಿಡಿ ಬಂದ್, 16ರಿಂದ ಅನಿರ್ದಿಷ್ಟ ಹೋರಾಟ


ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕ್ರನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಸಂಘಟನೆಗಳು ಎರಡು ಹಂತಗಳಲ್ಲಿ ಮುಷ್ಕರ ನಡೆಸಲು ತೀರ್ಮಾನಿಸಿವೆ.

ರಾಜ್ಯ ಸರ್ಕಾರದೊಂದಿಗೆ ನಡೆದ ಸಭೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ. ರವೀಂದ್ರನಾಥ ಎನ್. ಮೇಟಿ, ಕಾರ್ಯದರ್ಶಿ ಡಾ. ತಿಮ್ಮರಾಜು ಪಿಆರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ. ಬಳ್ಳಾರಿ ಹಾಗೂ ಕಾರ್ಯದರ್ಶಿ ಎಚ್. ಪುಟ್ಟರಾಜು ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಕೊಪ್ಪಳ ಬಂದ್: ಒಂದು ವರ್ಷದ ಹೋರಾಟ ನಿರ್ಣಾಯಕ ಹಂತಕ್ಕೆ

ಎರಡು ಹಂತದ ಹೋರಾಟ : ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು (CHC), ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC) ಹಾಗೂ ಡಿಸ್ಪೆನ್ಸರಿಗಳಲ್ಲಿ ಕಪ್ಪುಪಟ್ಟಿ ಧರಿಸಿ ಓಪಿಡಿ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ತುರ್ತು ಸೇವೆಗಳು ಮಾತ್ರ ಲಭ್ಯವಿರುತ್ತವೆ.

ಎರಡನೇ ಹಂತದಲ್ಲಿ, ಮಾರ್ಚ್ 16ರಿಂದ ವೈದ್ಯರು ಕರ್ತವ್ಯಕ್ಕೆ ಅನಿರ್ದಿಷ್ಟಾವಧಿ ಗೈರಾಗುವ ಮೂಲಕ ಸಂಪೂರ್ಣ ಮುಷ್ಕರ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಜ್ವರ: ಕರ್ನಾಟಕ–ಜಮ್ಮು ಕಾಶ್ಮೀರ ಮುಖಾಮುಖಿ

ಪ್ರಮುಖ ಬೇಡಿಕೆಗಳು: ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಸಮರ್ಪಕ ಔಷಧ ಸರಬರಾಜು, ನೇಮಕಾತಿ ನಿಯಮಗಳಲ್ಲಿ ಮೂರು ವರ್ಷಕ್ಕೊಮ್ಮೆ ತಿದ್ದುಪಡಿ, ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವುದು, ಐದು ವರ್ಷಗಳಿಂದ ಬಾಕಿ ಇರುವ ಮುಂಬಡ್ತಿಗಳನ್ನು ನೀಡುವುದು, ಉನ್ನತ ಮತ್ತು ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ, ಕೇಂದ್ರ ಪುರಸ್ಕೃತ ಯೋಜನೆಯಡಿ 6,000 ನೌಕರರಿಗೆ ತಿಂಗಳ ಮೊದಲ ವಾರವೇ ವೇತನ, ಖಾಲಿ ಇರುವ ವೈದ್ಯರು ಮತ್ತು ಅರೆ ವೈದ್ಯರ ಹುದ್ದೆಗಳ ಭರ್ತಿ
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವುದು, ತಾಂತ್ರಿಕ ಹುದ್ದೆಗಳಿಗೆ ವೈದ್ಯಕೀಯ ಸಿಬ್ಬಂದಿಯನ್ನೇ ನೇಮಕ ಮಾಡುವುದು, ಗುತ್ತಿಗೆ ವೈದ್ಯರು ಮತ್ತು ಸಿಬ್ಬಂದಿಯ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ.ಕರ್ತವ್ಯದ ಬಳಿಕ ಖಾಸಗಿ ವೈದ್ಯಕೀಯ ಸೇವೆಗೆ ಅವಕಾಶ ಸೇರದಂತೆ ವಿವಿದ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಸಂಘಟನೆ ಎಚ್ಚರಿಸಿದೆ.

Previous articleಕೊಪ್ಪಳ ಬಂದ್: ಒಂದು ವರ್ಷದ ಹೋರಾಟ ನಿರ್ಣಾಯಕ ಹಂತಕ್ಕೆ
Next articleಮಾರಿಕಾಂಬೆ ಜಾತ್ರೆ: ಯಶವಂತಪುರ – ತಾಳಗುಪ್ಪ ನಡುವೆ ವಿಶೇಷ ರೈಲು