ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿತ್ತೂರು ಸಮೀಪದ ಕುಲವಳ್ಳಿ ಕ್ರಾಸ್ ಬಳಿ ಮಧ್ಯರಾತ್ರಿ ನಡೆದ ದರೋಡೆ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮುಂಬೈ ಮೂಲದ ಇಂಜಿನಿಯರ್ ವೈಭವ ಮೋಹನ್ ವ್ಯವಹಾರೆ (30) ಅವರ ಕಾರನ್ನು ಅಡ್ಡಗಟ್ಟಿ ಸುಮಾರು 15 ಗ್ರಾಂ ತೂಕದ, ಅಂದಾಜು 2 ಲಕ್ಷ ರೂ. ಮೌಲ್ಯದ ಬಂಗಾರದ ಸರವನ್ನು ಎಂಟು ಜನರ ಗುಂಪು ಕಸಿದುಕೊಂಡು ಪರಾರಿಯಾಗಿದೆ.
ಇದನ್ನೂ ಓದಿ: ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ
ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿಕೊಂಡು ಮುಂದೆ ಸಾಗುತ್ತಿದ್ದ ವೇಳೆ ದ್ವಿಚಕ್ರ ವಾಹನಗಳಲ್ಲಿ ಬಂದ ದರೋಡೆಕೋರರು ಕಾರನ್ನು ಅಡ್ಡಗಟ್ಟಿ, ದೊಡ್ಡ ಕಲ್ಲು ಎಸೆದು ಕಾರು ನಿಲ್ಲಿಸಿದರು. ಬಳಿಕ ಕಾರನ್ನು ಸುತ್ತುವರಿದು ಬೆದರಿಸಿ ಚಿನ್ನದ ಸರ ಸೇರಿದಂತೆ ಕೆಲವು ವಸ್ತುಗಳನ್ನು ದೋಚಿಕೊಂಡು ಓಡಿಹೋದರು. ಆರೋಪಿಗಳ ಬಳಿ ಎರಡು ರಿವಾಲ್ವರ್ ಇದ್ದವು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್‌ಗೆ ನ್ಯಾಯಾಂಗ ಬಂಧನ
ಘಟನೆ ಬಳಿಕ ಪೀಡಿತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಿತ್ತೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ದರೋಡೆ ಘಟನೆ ಹಿನ್ನೆಲೆ ರಾತ್ರಿ ಪಹರೆ ಮತ್ತು ಹೆದ್ದಾರಿ ಪೆಟ್ರೋಲಿಂಗ್ ಹೆಚ್ಚಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.























