Home Advertisement
Home ಸುದ್ದಿ ದೇಶ AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಯುವ ಕಾಂಗ್ರೆಸಿಗರ ಪ್ರತಿಭಟನೆ

AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಯುವ ಕಾಂಗ್ರೆಸಿಗರ ಪ್ರತಿಭಟನೆ

0
27

ನವದೆಹಲಿ: ವಿಶ್ವದ ಗಮನ ಸೆಳೆದಿರುವ ದೇಶದ ಪ್ರತಿಷ್ಠಿತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಆ ಮೂಲಕ ಸಮಿಟ್‌ಗೆ ಬಂದಿದ್ದ ವಿಶ್ವ ಗಣ್ಯರ ಮುಂದೆ ಭಾರತದ ಅಪಮಾನ ಮಾಡಲಾಗಿದೆ.

ಇದೇ ವೇಳೆ `ಪ್ರಧಾನಿ ಮೋದಿ ಶರಣಾಗಿದ್ದಾರೆ, ಟ್ರೇಡ್ ಡೀಲ್ ರೈತ ವಿರೋಧಿ’ ಎಂದೆಲ್ಲ ಘೋಷಣೆಯನ್ನು ಕೂಗಲಾಯಿತು. ತತಕ್ಷಣವೇ ಎಚ್ಚೆತ್ತ ಪೊಲೀಸರು 10 ಯುವ ಕಾಂಗ್ರೆಸ್ ಕಾರ್ಯಕರ್ತ ರನ್ನು ವಶಕಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಟ್ರಂಪ್‌ಗೆ ಸುಂಕ ವಿಧಿಸುವ ಅಧಿಕಾರವಿಲ್ಲ: ಅಮೆರಿಕ ಸುಪ್ರೀಂ ಕೋರ್ಟ್

ಶೃಂಗಸಭೆ ನಡೆಯುತ್ತಿರುವಾಗ ಏಕಾಏಕಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಚಿತ್ರಗಳಿರುವ ಟಿ ಶರ್ಟ್ ಹಿಡಿದುಕೊಂಡು ಪ್ರತಿಭಟನೆ ಆರಂಭಿಸಿ ದರು. ಭಾರತ-ಅಮೆರಿಕ ನಡುವಿನ ಒಪ್ಪಂದದಲ್ಲಿ ಮೋದಿ ರಾಜಿ ಮಾಡಿಕೊಂಡಿದ್ದಾರೆ ಎನ್ನುವ ಘೋಷಣೆಗಳನ್ನು ಕೂಗತೊಡಗಿದರು.

ಪ್ರತಿಭಟನಾಕಾರರೊಂದಿಗೆ ಸಭಿಕರೂ ವಾಗ್ಯುದ್ಧಕ್ಕೆ ಇಳಿದರು. ಭಾರತದ ಪ್ರತಿಷ್ಠೆಗೆ ಧಕ್ಕೆ ತರುತ್ತಿರುವ ನೀವೇ ರಾಜಿ ಮಾಡಿಕೊಂಡಿರುವವರು ಎಂದು ಪ್ರತಿಭಟನಾಕಾರರೊಂದಿಗೆ ಜನರೇ ಚರ್ಚೆಗೆ ಇಳಿದರು.

Previous articleಟ್ರಂಪ್‌ಗೆ ಸುಂಕ ವಿಧಿಸುವ ಅಧಿಕಾರವಿಲ್ಲ: ಅಮೆರಿಕ ಸುಪ್ರೀಂ ಕೋರ್ಟ್
Next articleಇನ್ನು ಲವ್‌ ಮ್ಯಾರೇಜ್‌ಗೆ ಪೋಷಕರ ಅನುಮತಿ ಕಡ್ಡಾಯ