Home Advertisement
Home ನಮ್ಮ ಜಿಲ್ಲೆ ದಾವಣಗೆರೆ DK ಶಿವಕುಮಾರ್ CM ಆಗಲೆಂದು ಶಿವಗಂಗಾ ವ್ರತ: ಶಾಸಕ ಬಸವರಾಜ್ ಭರವಸೆ

DK ಶಿವಕುಮಾರ್ CM ಆಗಲೆಂದು ಶಿವಗಂಗಾ ವ್ರತ: ಶಾಸಕ ಬಸವರಾಜ್ ಭರವಸೆ

0
107

ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ತೀವ್ರವಾಗುತ್ತಿರುವ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ಪ್ರಾರ್ಥಿಸಿ ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ಅವರು ಸಂಕಲ್ಪ ಸಹಿತ ವ್ರತ ಕೈಗೊಂಡಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನೂರಕ್ಕೆ ನೂರು ಡಿಕೆ ಶಿವಕುಮಾರ್ ಅವರು ಈ ಅವಧಿಯಲ್ಲೇ ಮುಖ್ಯಮಂತ್ರಿ ಆಗುತ್ತಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:  ಸಚಿವೆ ಹೆಬ್ಬಾಳಕರ ಬೌಲ್‌ಗೆ ಸಚಿವ ಸತೀಶ್‌ ಜಾರಕಿಹೊಳಿ ಕ್ಲೀನ್ ಬೌಲ್ಡ್

ಅಧಿಕಾರ ಹಂಚಿಕೆ ಒಪ್ಪಂದ ಸತ್ಯ: ಕಾಂಗ್ರೆಸ್ ಸರ್ಕಾರದ ಒಳಗಿನ ಅಧಿಕಾರ ಹಂಚಿಕೆ ಕುರಿತು ಮಾತನಾಡಿದ ಬಸವರಾಜ್, “ಎರಡೂವರೆ ವರ್ಷದ ಸಿಎಂ ಬದಲಾವಣೆ ಒಪ್ಪಂದ ಆಗಿದೆ ಎಂಬುದು ಸತ್ಯ. ಅದೇ ಒಪ್ಪಂದದ ಆಧಾರದಲ್ಲಿಯೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ಇದು ಸುಳ್ಳು ಎನ್ನುವುದಾದರೆ, ಮುಖ್ಯಮಂತ್ರಿಯೇ ಸ್ಪಷ್ಟನೆ ನೀಡಲಿ,” ಎಂದು ಸವಾಲು ಹಾಕಿದರು.

ಹೈಕಮಾಂಡ್ ಮಧ್ಯಪ್ರವೇಶಕ್ಕೆ ಒತ್ತಾಯ: ಇದುವರೆಗೂ ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ ಎಂದು ಹೇಳಿದ ಅವರು, “ಅಧಿಕಾರ ಹಂಚಿಕೆ ಒಪ್ಪಂದವೇ ಆಗಿಲ್ಲ ಎಂದಾದರೆ, ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಬೇಕು. ಇಲ್ಲವೇ ಕಾಂಗ್ರೆಸ್ ಹೈಕಮಾಂಡ್ ಈ ಗೊಂದಲಕ್ಕೆ ತೆರೆ ಎಳೆಯಬೇಕು,” ಎಂದು ಆಗ್ರಹಿಸಿದರು.

ಇದನ್ನೂ ಓದಿ:  ಶಾಸಕ ಸತೀಶ್ ಸೈಲ್‌ಗೆ ಲಿವರ್ ಕಸಿಗಾಗಿ ವೈದ್ಯಕೀಯ ಜಾಮೀನು ಮಂಜೂರು

2028ರ ಚುನಾವಣೆ ದೃಷ್ಟಿಯಿಂದ ನಿರ್ಧಾರ ಅಗತ್ಯ: 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದೊಳಗಿನ ಅನಿಶ್ಚಿತತೆಯನ್ನು ಶೀಘ್ರದಲ್ಲೇ ಬಗೆಹರಿಸಬೇಕು ಎಂದು ಹೇಳಿದ ಬಸವರಾಜ್, “ಅಧಿಕಾರ ಹಂಚಿಕೆ ವಿಷಯ ತೋಳ ಬಂತು ತೋಳ ಕಥೆಯಂತಾಗಿದೆ. ತೋಳ ಬಂತೋ ಬಂದಿಲ್ಲವೋ ಅನ್ನುವುದಾದರೂ ಗೊತ್ತಾಗಬೇಕು,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿಕೆಶಿ ನನ್ನ ನಾಯಕ – ವ್ರತದ ಮೂಲಕ ಪ್ರಾರ್ಥನೆ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುರಿತು ಮಾತನಾಡಿದ ಅವರು, “ಡಿಕೆಶಿ ನಮ್ಮ ನಾಯಕರು. ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ಕನಸು. ಅದಕ್ಕಾಗಿ ದೇವರಿಗೆ ಹರಕೆ ಹೊತ್ತು ವ್ರತ ಮಾಡುತ್ತಿದ್ದೇನೆ. ಈ ಅವಧಿಯಲ್ಲೇ ಅವರು ಸಿಎಂ ಆಗುತ್ತಾರೆ ಎಂಬುದು ನನಗೆ ಖಚಿತ,” ಎಂದು ಹೇಳಿದರು.

ಇದನ್ನೂ ಓದಿ:  ಹಾಡಹಗಲೇ AAP ನಾಯಕ ಲಕ್ಕಿ ಒಬೆರಾಯ್ ಗುಂಡಿಕ್ಕಿ ಹತ್ಯೆ

ಈ ಹೇಳಿಕೆಗಳು ಕಾಂಗ್ರೆಸ್ ಒಳಗಿನ ನಾಯಕತ್ವ ಬದಲಾವಣೆ ಚರ್ಚೆಗೆ ಮತ್ತಷ್ಟು ಇಂಧನ ಸುರಿದಿದ್ದು, ಮುಂದಿನ ದಿನಗಳಲ್ಲಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ರಾಜಕೀಯ ವಲಯದ ಗಮನ ಕೇಂದ್ರೀಕೃತವಾಗಿದೆ.

Previous articleRBI ಯು Repo ದರದಲ್ಲಿ ಯಾವುದೇ ಬದಲಾವಣೆ ಇಲ್ಲ
Next articleಬೆಳೆವಿಮೆ ಯೋಜನೆ ಜಾರಿಯಲ್ಲಿ ಕರ್ನಾಟಕ ದೇಶದಲ್ಲಿಯೇ ನಂ.1