Home Advertisement
Home ಸುದ್ದಿ ದೇಶ ಕೇಂದ್ರ ಬಜೆಟ್‌: ಜೀವರಕ್ಷಕ ಔಷಧಿಗಳ ದರ ಇಳಿಕೆ

ಕೇಂದ್ರ ಬಜೆಟ್‌: ಜೀವರಕ್ಷಕ ಔಷಧಿಗಳ ದರ ಇಳಿಕೆ

0
3

ಹೊಸದಿಲ್ಲಿ: ಬಜೆಟ್‌ನಲ್ಲಿ ಔಷಧಿ ವಲಯಕ್ಕೆ 10,000 ಕೋಟಿ ರೂಪಾಯಿ ಘೋಷಣೆ ಮಾಡುವ ಮೂಲಕ ಫಾರ್ಮಾ (ಔಷಧ ಸಂಶೋಧನೆ, ಉತ್ಪಾದನೆ) ಕ್ಷೇತ್ರಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಂಪರ್ ಕೊಡುಗೆ ನೀಡಿದ್ದಾರೆ.

ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳ ಮೇಲಿನ ಸುಂಕ ರದ್ದು ಮಾಡಲಾಗುವುದು. ಇದರಿಂದ ಈ ಎರಡೂ ಮಾರಕ ರೋಗಗಳ ಔಷಧಗಳು ಇನ್ನು ಮುಂದೆ ಅಗ್ಗವಾಗಲಿವೆ.

ಕ್ಲಿನಿಕಲ್ ಟ್ರಯಲ್ ಸೈಟ್‌ಗಳು: ಈಗಾಗಲೇ ಮುಂಬಯಿ, ದಿಲ್ಲಿ, ಬೆಂಗಳೂರು, ಚೆನ್ನೈ, ಹೈದ್ರಾಬಾದ್ ಮಹಾನಗರಗಳಲ್ಲಿ ಪ್ರಮುಖ ಕ್ಲಿನಿಕಲ್ ಟ್ರಯಲ್ ಸೈಟ್‌ಗಳಿವೆ. ಈಗ ಹೊಸದಾಗಿ 1000ಕ್ಕೂ ಅಧಿಕ ಸಂಯೋಜಿತ ಕ್ಲಿನಿಕಲ್ ಟ್ರಯಲ್ ಸೈಟ್‌ಗಳ ನೆಟ್‌ವರ್ಕ್ ರಚನೆ.

ಆರೋಗ್ಯ ಮೂಲಸೌಕರ್ಯ: ಐದು ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳ ಸ್ಥಾಪನೆ. ಪ್ರತಿ ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಟ್ರೌಮಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗುವುದು. ರಾಂಚಿ ಮತ್ತು ಈಶಾನ್ಯ ಭಾರತದ ರಾಜ್ಯವೊಂದರಲ್ಲಿ ದೇಶದ ಎರಡು ಮತ್ತು ಮೂರನೇ ನಿಮ್ಹಾನ್ಸ್ ಸ್ಥಾಪನೆಗೆ ಒತ್ತು.

ಬಯೋಫಾರ್ಮಾ ಶಕ್ತಿ ಯೋಜನೆ: ಆರೋಗ್ಯ ಕ್ಷೇತ್ರದಲ್ಲಿ ಜೈವಿಕ ಔಷಧಗಳ ಸಂಶೋಧನೆ ಮತ್ತು ಉತ್ಪಾದನೆಗೆ ಉತ್ತೇಜನ ನೀಡಲು ಈ ಯೋಜನೆ ರೂಪಿಸಲಾಗಿದೆ.

ವೈದ್ಯಕೀಯ ಪ್ರವಾಸೋದ್ಯಮ: ಜಾಗತಿಕ ಮಟ್ಟದಲ್ಲಿ ಭಾರತದ ಆರೋಗ್ಯ ಸೇವೆಯನ್ನು ಪ್ರಚುರಪಡಿಸಲು ವೈದ್ಯಕೀಯ ಪ್ರವಾಸೋದ್ಯಮದ ಬಲವರ್ಧನೆಗೆ ಆದ್ಯತೆ ನೀಡಲಾಗಿದೆ. ದೇಶೀಯ ಆರೋಗ್ಯ ಸೇವೆಯಲ್ಲಿ ವಿಶ್ವದರ್ಜೆಯ ಗುಣಮಟ್ಟದ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಮೂಲಸೌಕರ್ಯಗಳನ್ನು ಬಲಪಡಿಸಲಾಗುವುದು. ತನ್ಮೂಲಕ ಭಾರತದಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅಧಿಕ ಸಂಖ್ಯೆಯ ವಿದೇಶಿ ಪ್ರವಾಸಿಗಳನ್ನು ಆಕರ್ಷಿಸುವುದು.

Previous articleಕೇಂದ್ರ ಬಜೆಟ್: ಆರೋಗ್ಯ ಕ್ಷೇತ್ರಕ್ಕೆ ಬಂಪರ್, ಆಯುರ್ವೇದಕ್ಕೆ ಮಹತ್ವ
Next articleವಿಕಸಿತ ಭಾರತ ಕಟ್ಟುವಂತ ಅಭಿವೃದ್ಧಿ ಶೀಲ ಬಜೆಟ್