Home Advertisement
Home ನಮ್ಮ ಜಿಲ್ಲೆ ಗದಗ ಲಕ್ಕುಂಡಿ ನಿಧಿ ಸರ್ಕಾರಕ್ಕೆ ನೀಡಿದ ಪ್ರಾಮಾಣಿಕತೆಗೆ ಗೌರವ

ಲಕ್ಕುಂಡಿ ನಿಧಿ ಸರ್ಕಾರಕ್ಕೆ ನೀಡಿದ ಪ್ರಾಮಾಣಿಕತೆಗೆ ಗೌರವ

0
110

ಕುಟುಂಬಕ್ಕೆ ಮನೆ–ಉದ್ಯೋಗದ ಭರವಸೆ

ಗದಗ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆಗೆ ಅಡಿಪಾಯ ತೆಗೆಯುವ ವೇಳೆ ಪತ್ತೆಯಾದ ನಿಧಿ ಸಂಬಂಧಿಸಿದ ಸ್ಥಳಕ್ಕೆ ಕಾನೂನು ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳ ಪರಿಶೀಲನೆಯ ನಂತರ ಮಾತನಾಡಿದ ಸಚಿವರು, “ಲಕ್ಕುಂಡಿ ಗ್ರಾಮವು ಭವ್ಯ ಇತಿಹಾಸವನ್ನು ಹೊಂದಿದೆ. ಮಳೆಗಾಲದಲ್ಲಿ ಇಲ್ಲಿಗೆ ಮುತ್ತು, ರತ್ನ, ಹವಳಗಳು ಸಿಗುತ್ತವೆ ಎಂಬ ನಂಬಿಕೆಗಳಿವೆ. ಈ ಪ್ರದೇಶದಲ್ಲಿ ಅನೇಕ ಅದ್ಭುತ ಹಾಗೂ ಐತಿಹಾಸಿಕ ಘಟನೆಗಳು ನಡೆದಿವೆ. ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಗಳು ನಡೆದಿವೆ” ಎಂದು ಹೇಳಿದರು.

ಇದನ್ನೂ ಓದಿ:  ಮನೆ ಅಡಿಪಾಯ ತೋಡುವಾಗ ಪುರಾತನ ಚಿನ್ನದ ನಿಧಿ ಪತ್ತೆ

466 ಗ್ರಾಂ ಚಿನ್ನ, 634 ಗ್ರಾಂ ತಾಮ್ರದ ತಂಬಿಗೆ ಪತ್ತೆ: ಎರಡು ದಿನಗಳ ಹಿಂದೆ ಲಕ್ಕುಂಡಿಯಲ್ಲಿ 466 ಗ್ರಾಂ ಚಿನ್ನಾಭರಣಗಳು ಮತ್ತು 634 ಗ್ರಾಂ ತಾಮ್ರದ ತಂಬಿಗೆಯೊಳಗೆ ಸಂಗ್ರಹಿತ ನಿಧಿ ಪತ್ತೆಯಾಗಿತ್ತು. ಪತ್ತೆಯಾದ ಈ ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕಾನೂನು ಪ್ರಕಾರ ಈ ನಿಧಿಯನ್ನು ಎಲ್ಲಿ ಸಂರಕ್ಷಿಸಬೇಕು, ಯಾವ ಉದ್ದೇಶಕ್ಕೆ ಬಳಸಬೇಕು ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದರು.

ಇದನ್ನೂ ಓದಿ:  ತೇಜಸ್ವಿ – ವಿಸ್ಮಯ : ಲಾಲ್‌ಬಾಗ್‌ನಲ್ಲಿ ಜ.14ರಿಂದ ಫಲಪುಷ್ಪ ಪ್ರದರ್ಶನ

ಪ್ರಾಮಾಣಿಕತೆಗೆ ಗೌರವ – ಕುಟುಂಬಕ್ಕೆ ನೆರವು: ನಿಧಿಯನ್ನು ಸರಕಾರಕ್ಕೆ ಒಪ್ಪಿಸಿದ ಬಾಲಕ ಪ್ರಜ್ವಲ್ ರಿತ್ತಿ ಮತ್ತು ಅವರ ತಾಯಿ ಕಸ್ತೂರೆವ್ವ ರಿತ್ತಿ ಕುಟುಂಬದ ಪ್ರಾಮಾಣಿಕತೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಹೂವು ಕಟ್ಟಿ ಮಾರಾಟ ಮಾಡುವ ಬಡತನದ ನಡುವೆಯೂ, ದೊರೆತ ಚಿನ್ನಾಭರಣ ನಮ್ಮದಲ್ಲ ಎಂದು ಸರ್ಕಾರಕ್ಕೆ ಒಪ್ಪಿಸಿರುವುದು ಅಪೂರ್ವ ಪ್ರಾಮಾಣಿಕತೆಗೆ ಸಾಕ್ಷಿ ಎಂದು ಸಚಿವ ಪಾಟೀಲ ಶ್ಲಾಘಿಸಿದರು.

ಈ ಕುಟುಂಬಕ್ಕೆ ಮನೆ ನೀಡಬೇಕು. ಜಾಗ ಒದಗಿಸಬೇಕು. ಬಾಲಕನ ತಾಯಿಗೆ ಉದ್ಯೋಗ ನೀಡಬೇಕು. ಎಂಬ ಬೇಡಿಕೆಯನ್ನು ಹಿರಿಯರು ಮುಂದಿಟ್ಟಿದ್ದಾರೆ.

ಇದನ್ನೂ ಓದಿ:  ಅನ್ನದಾತೆಯ ಸಂಕ್ರಾಂತಿ: ರೈತ ಮಹಿಳೆಯರಿಗೆ ಸಮರ್ಪಿತ ಸಂಭ್ರಮ

PUC ವರೆಗೂ ಉಚಿತ ಶಿಕ್ಷಣ: ಪ್ರಜ್ವಲ್ ರಿತ್ತಿಗೆ ಪಿಯುಸಿವರೆಗೂ ಉಚಿತ ಶಿಕ್ಷಣ ನೀಡೋದಾಗಿ ಸಚಿವರು ಘೋಷಣೆ ಮಾಡಿದ್ದಾರೆ. ಬಿ ಎಚ್ ಪಾಟೀಲ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಜ್ವಲ್ ಈಗ 8ನೇ ಕ್ಲಾಸ್​ ಕಲಿಯುತ್ತಿದ್ದಾರೆ. ಪಿಯುಸಿವರೆಗೂ ಸಂಪೂರ್ಣ ಉಚಿತ ಶಿಕ್ಷಣ ನೀಡುವ ಭರವಸೆಯನ್ನ ಸಚಿವರು ನೀಡಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಈ ಎಲ್ಲ ವಿಚಾರಗಳನ್ನು ನಾಳೆ ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಕಾನೂನಿಗೆ ಅನುಗುಣವಾಗಿ ಕಸ್ತೂರೆವ್ವ ರಿತ್ತಿ ಕುಟುಂಬಕ್ಕೆ ನೆರವು ನೀಡಲಾಗುವುದು. ಪ್ರಾಮಾಣಿಕತೆಗೆ ಗೌರವವಾಗಿ ಮನೆ ಹಾಗೂ ಉದ್ಯೋಗ ನೀಡಲಾಗುತ್ತದೆ ಎಂದು ಡಾ. ಎಚ್.ಕೆ. ಪಾಟೀಲ ಭರವಸೆ ನೀಡಿದರು.

ಇದನ್ನೂ ಓದಿ:  BRICS ಶೃಂಗಸಭೆಯ ಲೋಗೋ, ಥೀಮ್, ವೆಬ್‌ಸೈಟ್ ಬಿಡುಗಡೆ

ನಿಧಿಗೆ ಸಂಬಂಧಿಸಿದ ಅಂತಿಮ ನಿರ್ಣಯವನ್ನು ನಾಳೆ ಸಂಜೆ ಒಳಗೆ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಪುರಾತತ್ವ ಇಲಾಖೆ ಅಭಿಪ್ರಾಯ ಪಡೆಯಲಿದೆ ಜಿಲ್ಲಾಡಳಿತ: ನಿಧಿಯನ್ನು ಏನು ಮಾಡಬೇಕು ಎಂಬ ಕುರಿತು ಜಿಲ್ಲಾಡಳಿತ ಪರಿಶೀಲನೆ ನಡೆಸುತ್ತಿದೆ. ಜಾಗವನ್ನು ವಶಕ್ಕೆ ಪಡೆಯುವ ಬಗ್ಗೆ ಪುರಾತತ್ವ ಇಲಾಖೆಯ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಇದನ್ನೂ ಓದಿ:  ‘ಜನ ನಾಯಗನ್’ಗೆ ಬೆಂಬಲ ನೀಡಿದ ರಾಹುಲ್ ಗಾಂಧಿ

ಉಪಸ್ಥಿತರಿದ್ದವರು: ಈ ಸಂದರ್ಭದಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಸೆಟ್ಟೆಪ್ಪ ಅಸೂಟಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ ಡಾ. ಶರಣು ಗೋಗೇರಿ ಹಾಗು ಗ್ರಾಮ ಪಂಚಾಯತ್ ಅಧ್ಯಕ್ಷ ಕೆಂಚಪ್ಪ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.