SK Home Ad
Home ನಮ್ಮ ಜಿಲ್ಲೆ ಕಲಬುರಗಿ ಕಲ್ಯಾಣ ನಾಡಿಗೆ ಬಂದಿಳಿದ ಮೋದಿ

ಕಲ್ಯಾಣ ನಾಡಿಗೆ ಬಂದಿಳಿದ ಮೋದಿ

0
165

ಕಲಬುರಗಿ: ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿಸಿದ ಹಕ್ಕು ಪತ್ರ ವಿತರಿಸಲು ಹಾಗೂ ನಾರಾಯಣಪುರ ಎಡದಂಡೆ ಕಾಲುವೆ ನವೀಕರಣದ ಕಾಮಗಾರಿ ಸೇರಿ ಹತ್ತು ಸಾವಿರ ಕೋ.ರೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಗೆ ಬಂದಿಳಿದರು.
ನವದೆಹಲಿಯಿಂದ ವಿಶೇಷ ವಿಮಾನ ಮೂಲಕ ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಘನವೆತ್ತ ರಾಜ್ಯಪಾಲರಾದ ತಾವರಚೆಂದ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಪೀಲ್, ಬಿಜೆಪಿ ರಾಜ್ಯದ ಉಸ್ತುವಾರಿ ಅರುಣಸಿಂಗ್, ಕಂದಾಯ ಸಚಿವ ಆರ್. ಅಶೋಕ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ ಸೇರಿದಂತೆ ಪ್ರಮುಖರು ಪ್ರಧಾನಿ ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ತದನಂತರ ನೇರವಾಗಿ ವಿಶೇಷ ಹೆಲಿಕಾಪ್ಟರ್ ಮೂಲಕ ಯಾದಗಿರಿ ಜಿಲ್ಲೆಯ ಕೊಡೆಕಲ್‌ಗೆ ತೆರಳಿರುವ ಮೋದಿ, ನಂತರ ಮಧ್ಯಾಹ್ನ 2 ಗಂಟೆ ಸಮಾರಿಗೆ ಮಳಖೇಡದಲ್ಲಿ ನಡೆಯಲಿರುವ ಕಾಯ೯ಕ್ರಮದಲ್ಲಿ. ಭಾಗವಹಿಸಲಿದ್ದಾರೆ.