Home Advertisement
Home ತಾಜಾ ಸುದ್ದಿ ಮಂತ್ರಾಲಯಕ್ಕೆ ಜಾಗ ಕೊಟ್ಟಿದ್ದು ಆದೋನಿ ನವಾಬರು…

ಮಂತ್ರಾಲಯಕ್ಕೆ ಜಾಗ ಕೊಟ್ಟಿದ್ದು ಆದೋನಿ ನವಾಬರು…

0
139

ರಾಯಚೂರು: ರಾಜ್ಯಾದ್ಯಂತ ವಕ್ಫ್ ಕುರಿತಂತೆ ಚರ್ಚೆ ಆಗುತ್ತಿಲಿದೆ. ಈ ಮಧ್ಯೆ ಮಂತ್ರಾಲಯ ಜಾಗ ಆದೋನಿ ನವಾಬರು ಕೊಟ್ಟಿದ್ದು. ಅದನ್ನು ವಕ್ಫ್ ಬೋರ್ಡ್‌ದು ಅಂತಾ ಯಾರದ್ರೂ ಕೇಳಲು ಹೋಗಿದ್ರಾ? ಎನ್ನುವ ಮೂಲಕ ಮಾಜಿ ಸಚಿವ ಸಿಎಂ ಇಬ್ರಾಹಿಂ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ಬಂದಾಗ ನಮ್ಮ ಬೃಂದಾವನ ಇಲ್ಲಿ ಮಾಡುತ್ತೇವೆ ಎಂದಾಗ ಮಂತ್ರಾಲಯ ಖಾಜಿಗೆ ಕೊಟ್ಟ ಜಾಗ ಕ್ಯಾನ್ಸಲ್ ಮಾಡಿ ಆದೋನಿ ನವಾಬರು ಮಂತ್ರಾಲಯ ಸ್ವಾಮೀಜಿಗೆ ಕೊಟ್ಟರು ಈ ಕಥೆಯನ್ನು ಮಂತ್ರಾಲಯ ಸ್ವಾಮೀಜಿಗಳೇ ಹೇಳುತ್ತಾರೆ ಎಂದರು.
ಶೃಂಗೇರಿ ಶಾರದಾ ಪೀಠದ ಮೇಲೆ ಪೇಶ್ವಗಳು ದಾಳಿ ಮಾಡಿದಾಗ ಟಿಪ್ಪು ಸುಲ್ತಾನ್ ಸೈನ್ಯ ಕಳುಹಿಸಿ ಮತ್ತೆ ಪುನಃ ಶಾರದಾ ಪೀಠವನ್ನು ಸ್ಥಾಪನೆ ಮಾಡಿದ್ರು ಇದು ಇತಿಹಾಸ, ಇದು ನಮ್ಮ ‌ಪರಂಪರೆ, ಇದು ನಮ್ಮ ಸಂಸ್ಕೃತಿ. ಈ ಚಿಲ್ಲರೇ ಮುಂಡೆದವೂ ರಾಜಕಾರಣಿಗಳು ರಾಜಕಾರಣಕ್ಕೆ ಬಂದು, ಈ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Previous articleಗ್ರಾಮೀಣ ಭಾರತದ ಆರ್ಥಿಕತೆ ಸದೃಢವಾಗಲು ಸಹಕಾರ ಕ್ಷೇತ್ರ ಸಹಕಾರಿ
Next articleಗ್ಯಾರಂಟಿ ನಿಭಾಯಿಸಲು ಆಗದೇ ಎಪಿಎಲ್‌, ಬಿಪಿಎಲ್‌ ಕಾರ್ಡ್‌ ರದ್ದು