ನಾಯ್ಡು ಪಾಪಕ್ಕೆ ಪ್ರಾಯಶ್ಚಿತ್ತ ಸೆ.೨೮ಕ್ಕೆ ಆಂಧ್ರದಲ್ಲಿ ಪೂಜೆ

0
17

ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಿರುಪತಿ ಲಡ್ಡು ಕುರಿತು ಮಾಡಿರುವ ಆರೋಪದಿಂದ ಉಂಟಾಗಿರುವ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಬರುವ ಶನಿವಾರ ರಾಜ್ಯಾದ್ಯಂತ ಪೂಜೆ-ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎನ್. ಜಗನ್ಮೋಹನ ರೆಡ್ಡಿ ಜನರಿಗೆ ಕರೆ ನೀಡಿದ್ದಾರೆ. ಜಗನ್ ರೆಡ್ಡಿ ಕಾಲದಲ್ಲಿ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಸೇರಿಸಲಾಗಿದೆ ಎಂದು ಸಿಎಂ ನಾಯ್ಡು ಆರೋಪಿಸಿದ ನಂತರ ದೇಶದಾದ್ಯಂತ ಇದು ಭಾರಿ ಕಳವಳಕ್ಕೆ ಕಾರಣವಾಗಿದೆ. ಚಂದ್ರಬಾಬು ಮಾಡಿದ ಪಾಪದಿಂದ ಮುಕ್ತರಾಗಲು ಸೆ. ೨೮ರ ಶನಿವಾರ ದೇವಸ್ಥಾನಗಳಲ್ಲಿ ಧಾರ್ಮಿಕ ಆಚರಣೆ ಕೈಗೊಳ್ಳುವಂತೆ ವೈಎಸ್‌ಆರ್‌ಪಿ ಕರೆ ನೀಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಕ್ಸ್ ತಾಣದಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Previous articleದಿಂಡಿಗಲ್ ಡೇರಿ ವಿರುದ್ಧ ತಿರುಪತಿ ದೇವಾಲಯ ದೂರು
Next articleಕವಿವಿ ಪ್ರಭಾರ ಕುಲಪತಿಯಾಗಿ ಡಾ. ಮಂಜುಳಾ