Home Advertisement
Home ತಾಜಾ ಸುದ್ದಿ ರಾಜ್ಯಪಾಲರದು ರಾಜಕೀಯ ಪ್ರೇರಿತ ನಿರ್ಧಾರ

ರಾಜ್ಯಪಾಲರದು ರಾಜಕೀಯ ಪ್ರೇರಿತ ನಿರ್ಧಾರ

0
152

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಆರೋಪ ಹೊರಿಸಿರುವ ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾಸಿಕ್ಯೂಶನ್ ಗೆ ಒಪ್ಪಿಗೆ ನೀಡಿರುವ ರಾಜ್ಯಪಾಲರ ನಿರ್ಧಾರ ರಾಜಕೀಯ ಪ್ರೇರಿತವಾದುದು. ಪಕ್ಷದ ಹೈಕಮಾಂಡ್ ಮತ್ತು ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಒಪ್ಪಿಗೆ ನೀಡಿದ್ದಾರೆ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಆರೋಪಿಸಿದರು.

ರಾಜ್ಯಪಾಲರು ಕಾನ್ಸ್ಟ್ಯೂಷನಲ್ ಹೆಡ್ ಆಗಿರುತ್ತಾರೆ. ಪಕ್ಷಪಾತ ನಿರ್ಧಾರ ತೆಗೆದುಕೊಳ್ಳಬಾರದು. ಕಾನೂನು ಪ್ರಕಾರವೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಮಾಜು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಮೇಲೂ ಗಂಭೀರ ಆರೋಪಗಳ ಕುರಿತ ದಾಖಲಾತಿ ರಾಜ್ಯಪಾಲರಿಗೆ ಸಲ್ಲಿಕೆಯಾಗಿದ್ದವು. ಆದರೆ, ಪ್ರಾಸಿಕ್ಯೂಶನ್ ಗೆ ಕೊಡಲಿಲ್ಲ. ಆದರೆ, ಈಗ ಯಾವುದೇ ಆಧಾರವಿಲ್ಲದ ಆರೋಪ ಕುರಿತ ದೂರಿಗೆ ಪ್ರಾಸಿಕ್ಯೂಶನ್ ಗೆ ಒಪ್ಪಿಗೆ ನೀಡಿರುವುದನ್ನು ಖಂಡಿಸುತ್ತೇವೆ ಎಂದು ಅಬ್ಬಯ್ಯ ಹೇಳಿದ್ದಾರೆ.

Previous articleಪಡಿತರ ಅಕ್ಕಿ ಜಪ್ತಿ : ಪ್ರಕರಣ ದಾಖಲು
Next articleತಜ್ಞರ ಅಭಿಪ್ರಾಯ ಪಡೆದು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ