Home Advertisement
Home ತಾಜಾ ಸುದ್ದಿ ಮುಧೋಳ ತೊರೆಯುವುದಿಲ್ಲ: ಕಾರಜೋಳ

ಮುಧೋಳ ತೊರೆಯುವುದಿಲ್ಲ: ಕಾರಜೋಳ

0
171
ಗೋವಿಂದ ಕಾರಜೋಳ

ಬಾಗಲಕೋಟೆ: ಮುಧೋಳ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನ ಮುಧೋಳದಲ್ಲಿಯೇ ಅಂತ್ಯ ಕಾಣಲಿದೆ. ಈ ಬಾರಿ ಸ್ಪರ್ಧಿಸುವದು, ಪಕ್ಷದ ಕೆಲಸದಲ್ಲಿ ತೊಡಗುವದು ವರಿಷ್ಠರಿಗೆ ಬಿಟ್ಟ ವಿಷಯ. ಇದರಲ್ಲಿ ನನ್ನ ಸ್ವತಂತ್ರ ಪಾತ್ರ ಏನೂ ಇಲ್ಲ ಎಂದು ಅವರು ತಿಳಿಸಿದರು. ಬೇರೆ ಕಡೆ ಸ್ಪರ್ಧಿಸುವುದಾಗಿ ಹಬ್ಬಿರುವ ವಿಚಾರ ಕೇವಲ ಊಹಾಪೋಹ ಮಾತ್ರ. ಇದರ ಹಿಂದೆ ಯಾರಿದ್ದಾರೆಂಬುದು ತಮಗೆ ಗೊತ್ತಿಲ್ಲ ಎಂದರು.
ರಾಜಕಾರಣದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ದೀಪ ಹಚ್ಚುವವರು ಯಾರೂ ಇಲ್ಲ. ಅದು ಮುಳಗುತ್ತಿರುವ ಹಡಗು ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿಯೇ ಪ್ರಮುಖರು ಪಕ್ಷ ಬಿಡುತ್ತಿರುವದು ವಿಚಿತ್ರ ಎಂದು ಅವರು ಲೇವಡಿ ಮಾಡಿದರು.