Home Advertisement
Home ನಮ್ಮ ಜಿಲ್ಲೆ ಪಿಎಸ್‌ಐ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಬೀದರ್ ಯುವಕ ಆತ್ಮಹತ್ಯೆ

ಪಿಎಸ್‌ಐ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಬೀದರ್ ಯುವಕ ಆತ್ಮಹತ್ಯೆ

0
124
ಆತ್ಮಹತ್ಯೆ

ಬೀದರ್ : ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬೀದರ್ ಮೂಲದ ಯುವಕನೋರ್ವ ಬೆಂಗಳೂರಿನ ವಿಜಯನಗರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಭಿಷೇಕ್ (24) ಆತ್ಮಹತ್ಯೆಗೆ ಶರಣಾದ ಯುವಕ. ಮೂಲತಃ ತಾಲ್ಲೂಕಿನ ಬಾವಗಿ ಗ್ರಾಮದವನಾಗಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.