SK Home Ad
Home ಸಿನಿ ಮಿಲ್ಸ್ ಸಿಂಹದ ಕಿರೀಟ ಟಾಸ್ಕ್‌ನಲ್ಲಿ ಗಾನವಿ ಮೋಸಕ್ಕೆ ಗಗನ್ ಸೇಡಿನ ಶಪಥ; ‘ನಾಲ್ಕು ಹೆಣ್ಣುಮಕ್ಕಳು’ ಹೇಳಿಕೆಗೆ ವೀಕ್ಷಕರ...

ಸಿಂಹದ ಕಿರೀಟ ಟಾಸ್ಕ್‌ನಲ್ಲಿ ಗಾನವಿ ಮೋಸಕ್ಕೆ ಗಗನ್ ಸೇಡಿನ ಶಪಥ; ‘ನಾಲ್ಕು ಹೆಣ್ಣುಮಕ್ಕಳು’ ಹೇಳಿಕೆಗೆ ವೀಕ್ಷಕರ ಕೆಂಗಣ್ಣು!

0
26

BBK13: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಗೆಳೆತನ ಮತ್ತು ನಂಬಿಕೆಗಳು ಕೇವಲ ಆಟಕ್ಕಷ್ಟೇ ಸೀಮಿತವಾಗುತ್ತಿದ್ದು, ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಗಾನವಿ ತಮ್ಮ ಆಪ್ತರಿಗೆ ಕೈಕೊಡುವ ಮೂಲಕ ದೊಡ್ಡ ಸಂಚಲನ ಮೂಡಿಸಿದ್ದಾರೆ. ಮನೆಯಲ್ಲಿ ‘ಸಿಂಹ’ನ ಆಯ್ಕೆಗಾಗಿ ನಡೆದ ಟಾಸ್ಕ್‌ನಲ್ಲಿ 13ನೇ ಬಾರಿ ಯಾರ ತಲೆಯಲ್ಲಿ ಕಿರೀಟ ಇರುತ್ತದೆಯೋ ಅವರು ಸಿಂಹವಾಗುತ್ತಾರೆ ಎಂಬ ನಿಯಮವಿತ್ತು. ಕಿರೀಟ ತಮ್ಮ ಗುಂಪಿನಲ್ಲೇ ಉಳಿಯುವಂತೆ ತಾಂಡವ್ ರಾಮ್ ಯೋಜನೆ ರೂಪಿಸಿದ್ದರು. ಅದರಂತೆ ಧನುಷ್ ಕಿರೀಟವನ್ನು ಗಾನವಿಗೆ ನೀಡಿದರೂ, ಗಾನವಿ ಅದನ್ನು ವಾಪಸ್ ತಂಡಕ್ಕೆ ನೀಡದೆ ಬೇರೆಯವರಿಗೆ ಹಸ್ತಾಂತರಿಸಿದರು. ಪರಿಣಾಮವಾಗಿ ಕಿರೀಟ ಅಂತಿಮವಾಗಿ ಗುಳ್ಳೆನರಿ ಯಶಸ್ ತಲೆಯ ಮೇಲೆ ಕುಳಿತುಕೊಂಡಿತು.

ಗಾನವಿಯ ಈ ನಡೆಗೆ ತೀವ್ರ ಬೇಸರಗೊಂಡ ಗಗನ್ ಚಿನ್ನಪ್ಪ, ತಾಂಡವ್ ಮತ್ತು ಪ್ರಶಾಂತ್ ಮುಂದೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. “ಗಾನವಿಗೆ ನಂಬಿಕೆ ದ್ರೋಹ ಎಂದರೆ ಏನು ಎಂದು ಅರ್ಥ ಮಾಡಿಸಬೇಕು. ಈಗಲೂ ಗೆಳೆಯರಾಗಿಯೇ ಇದ್ದು, ಮುಖ್ಯವಾದ ಸಮಯದಲ್ಲಿ ನಂಬಿಸಿ ಬೆನ್ನಿಗೆ ಚೂರಿ ಹಾಕಿದಂತೆ ಕೈಕೊಡೋಣ, ಆಗ ಅವಳಿಗೆ ಶಾಕ್ ಆಗಬೇಕು” ಎಂದು ಗಗನ್ ಸೇಡಿನ ಮಾತುಗಳನ್ನಾಡಿದ್ದಾರೆ.

ಇದೇ ವೇಳೆ, ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ವಿಚಾರವಾಗಿ ಗಗನ್ ಆಡಿದ ಮಾತುಗಳು ಹೊಸ ವಿವಾದಕ್ಕೆ ಕಾರಣವಾಗಿವೆ. ಊಟ ಮಾಡುವಾಗ ತಾಂಡವ್ “ಮನೆಯಲ್ಲಿ ಮೂರು ಹೆಣ್ಣುಮಕ್ಕಳಿದ್ದಾರೆ” ಎಂದಾಗ, ಗಗನ್ ಮುಗುಳುನಗುತ್ತಾ “ನಾಲ್ಕು ಹೆಣ್ಣುಮಕ್ಕಳು ಇರೋದಲ್ವ?” ಎಂದು ಪ್ರತಿಕ್ರಿಯಿಸಿದ್ದಾರೆ. ತಾಂಡವ್ ಎಚ್ಚರಿಸಿದ ತಕ್ಷಣ, ಎರಡು ವಾರಗಳ ಹಿಂದೆ ಎಲಿಮಿನೇಟ್ ಆದ ಸೋನಿಕಾ ಕೂಡ ಇದ್ದಾರೆಂದು ಭಾವಿಸಿದೆ ಎಂದು ಗಗನ್ ಸಮಜಾಯಿಷಿ ನೀಡಿದ್ದಾರೆ. ಆದರೆ, ಸದಾ ಮಹಿಳಾ ಸ್ಪರ್ಧಿಗಳ ಜೊತೆ ಇರುತ್ತಾರೆಂಬ ಕಾರಣಕ್ಕೆ ಯಶಸ್ ಅವರನ್ನು ಉದ್ದೇಶಿಸಿ ಗಗನ್ ಹೀಗೆ ವ್ಯಂಗ್ಯವಾಡಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ವೀಕೆಂಡ್ ಪಂಚಾಯಿತಿಯಲ್ಲಿ ಈ ಬಗ್ಗೆ ಪ್ರಶ್ನಿಸುವಂತೆ ಒತ್ತಾಯಿಸಿದ್ದಾರೆ.