SK Home Ad
Home ಸುದ್ದಿ ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ: 75ರ ಇಳಿ ವಯಸ್ಸಿನಲ್ಲಿ ಕನ್ಹಯ್ಯ ಲಾಲ್ ಮದುವೆ |ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ: 75ರ ಇಳಿ ವಯಸ್ಸಿನಲ್ಲಿ ಕನ್ಹಯ್ಯ ಲಾಲ್ ಮದುವೆ |ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ

0
17

ವಯಸ್ಸು ಎಂಬುದು ಪ್ರೀತಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ 75 ವರ್ಷದ ಕನ್ಹಯ್ಯ ಲಾಲ್ ಮತ್ತು 63 ವರ್ಷದ ಸಬೀನಾ ಅವರ ವಿವಾಹವೇ ಸಾಕ್ಷಿಯಾಗಿದೆ. ವೃದ್ಧಾಶ್ರಮದಲ್ಲಿ ಪರಿಚಯವಾದ ಈ ಇಬ್ಬರು ಹಿರಿಯರು ಪರಸ್ಪರ ಪ್ರೀತಿಸಿ, ಜೀವನದ ಕೊನೆಯ ಹಂತದಲ್ಲಿ ಒಟ್ಟಾಗಿ ಬದುಕುವ ನಿರ್ಧಾರ ಕೈಗೊಂಡಿದ್ದಾರೆ. ಇದೀಗ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಯಸ್ಸಾದ ಬಳಿಕ ಹಿರಿಯ ಜೀವಿಗಳಿಗೆ ಮನೆಯ ಮಕ್ಕಳ ಪ್ರೀತಿ ಮತ್ತು ಅವರ ಜೋತೆ ಸಮಯ ಕಳೆಯುವ ಆಸೆ ಇರುತ್ತದೆ. ಆದರೆ ಇಂದಿನ ಮಕ್ಕಳು ತಮ್ಮ ಕೆಲಸದ ಒತ್ತಡದಲ್ಲಿ ಅವರು ಸಮಯ ಮತ್ತು ಪ್ರೀತಿಯಿಂದ ವಂಚಿತವಾಗುತ್ತಾರೆ. ಹಿರಿಯರು ದಿನನಿತ್ಯೆ ಒಂಟಿತನ ಅನುಭವಿಸುತ್ತಾರೆ. ಇನ್ನು 100 ಕ್ಕೆ 90 ಪ್ರತಿಶತ ಜನರು ತಮ್ಮ ತಾಯಿ ತಂದೆಯನ್ನು ಭಾರ ಎಂದು ಭಾವಿಸಿ ಚನ್ನಾಗಿ ನೋಡಿಕೊಳ್ಳುವುದಿಲ್ಲ, ದಿನನಿತ್ಯ ಮನೆಯಲ್ಲಿ ಕಲಹದಿಂದ ಹಿರಿಯರು ಮಾನಸಿಕವಾಗಿ ಕುಗ್ಗುತ್ತಾರೆ.
ಕನ್ಹಯ್ಯ ಲಾಲ್ ಮತ್ತು ಸಬೀಯಾ ತಮ್ಮ ತಮ್ಮ ಸುಖಃ ದುಖ ಗಳನ್ನು ಹಂಚಿಕೊಳ್ಳುತ್ತಾ ಅವರ ಮಧ್ಯ ಸ್ನೇಹವಾಗಿ ಅದು ಪ್ರೀತಿಯಾಗಿ ಅರಳಿತು.

ಸಾಮಾನ್ಯವಾಗಿ ಮದುವೆ ಎಂದರೆ ಯುವ ಜೋಡಿಗಳ ಜೀವನದ ಹೊಸ ಆರಂಭ ಎಂದು ಭಾವಿಸಲಾಗುತ್ತದೆ. ಆದರೆ ಕನ್ಹಯ್ಯ ಲಾಲ್ ಮತ್ತು ಸಬೀನಾ ಅವರು ಈ ಕಲ್ಪನೆಗೆ ಹೊಸ ಅರ್ಥ ನೀಡಿದ್ದಾರೆ. ಜೀವನದ ಹಲವು ಅನುಭವಗಳನ್ನು ಕಂಡ ಬಳಿಕವೂ ಸಂಗಾತಿಯ ಅಗತ್ಯ, ಪ್ರೀತಿ ಮತ್ತು ಪರಸ್ಪರ ಕಾಳಜಿಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ತಮ್ಮ ನಿರ್ಧಾರದ ಮೂಲಕ ತೋರಿಸಿದ್ದಾರೆ.

ವೃದ್ಧಾಶ್ರಮದಲ್ಲಿ ಕಳೆದ ದಿನಗಳ ನಡುವೆ ಇಬ್ಬರಿಗೂ ಪರಿಚಯ ಬೆಳೆದು, ಅದು ಆತ್ಮೀಯತೆಗೆ ತಿರುಗಿದೆ. ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಜೊತೆಯಾಗಿ ಬದುಕುವ ಬಯಕೆ ಅವರಲ್ಲಿ ವಿವಾಹದ ನಿರ್ಧಾರಕ್ಕೆ ಕಾರಣವಾಗಿದೆ. ಬಳಿಕ ಇಬ್ಬರೂ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದು, ಈ ವಿಶೇಷ ಮದುವೆ ಹಲವರ ಗಮನ ಸೆಳೆದಿದೆ.

ಈ ವಿವಾಹವು ಕೇವಲ ಇಬ್ಬರ ಜೀವನದ ಹೊಸ ಅಧ್ಯಾಯವಲ್ಲ, ಹಿರಿಯ ನಾಗರಿಕರ ಭಾವನೆಗಳು, ಒಡನಾಟ ಮತ್ತು ಸಂಗಾತಿಯ ಅಗತ್ಯದ ಮಹತ್ವವನ್ನೂ ಸಾರುತ್ತದೆ. ವಯಸ್ಸಾದಂತೆ ಪ್ರೀತಿ, ಕಾಳಜಿ ಮತ್ತು ಭಾವನಾತ್ಮಕ ಬೆಂಬಲದ ಅಗತ್ಯ ಕಡಿಮೆಯಾಗುವುದಿಲ್ಲ ಎಂಬ ಸಂದೇಶವನ್ನು ಈ ಜೋಡಿ ನೀಡಿದ್ದಾರೆ.
ಜೀವನದ ಯಾವುದೇ ಹಂತದಲ್ಲಾದರೂ ಹೊಸ ಆರಂಭ ಸಾಧ್ಯ ಎಂಬುದನ್ನು ಕನ್ಹಯ್ಯ ಲಾಲ್ ಮತ್ತು ಸಬೀನಾ ಅವರ ವಿವಾಹ ನೆನಪಿಸುತ್ತದೆ. ವೃದ್ಧಾಶ್ರಮದಲ್ಲಿ ಅರಳಿದ ಈ ಪ್ರೀತಿ ಇದೀಗ ವಿವಾಹ ಬಂಧನದ ಮೂಲಕ ಹೊಸ ಬದುಕಿನ ಪಯಣ ಆರಂಭಿಸಿದೆ.