SK Home Ad
Home ಸಿನಿ ಮಿಲ್ಸ್ ಚೆನ್ನೈನಲ್ಲಿ ಕಾವ್ಯಾ ಮಾರನ್–ಅನಿರುದ್ಧ್ ಅದ್ಧೂರಿ ಆರತಕ್ಷತೆ! ಯಾವೆಲ್ಲಾ ಸ್ಟಾರ್ಸ್ ಬಂದಿದ್ರು ಗೊತ್ತಾ?

ಚೆನ್ನೈನಲ್ಲಿ ಕಾವ್ಯಾ ಮಾರನ್–ಅನಿರುದ್ಧ್ ಅದ್ಧೂರಿ ಆರತಕ್ಷತೆ! ಯಾವೆಲ್ಲಾ ಸ್ಟಾರ್ಸ್ ಬಂದಿದ್ರು ಗೊತ್ತಾ?

0
18

ತಮಿಳು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹಮಾಲಕಿ ಕಾವ್ಯಾ ಮಾರನ್ ಅವರ ವಿವಾಹ ಆರತಕ್ಷತೆ ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದಿದೆ.

ನವೆಂಬರ್ 11ರಂದು ಗ್ರೀಸ್‌ನಲ್ಲಿ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದ ಜೋಡಿ, ನವೆಂಬರ್ 21ರಂದು ಚೆನ್ನೈನ ಐಟಿಸಿ ಗ್ರ್ಯಾಂಡ್ ಚೋಳ ಹೋಟೆಲ್‌ನಲ್ಲಿ  ಮದುವೆ ಆರತಕ್ಷತೆ ಆಯೋಜಿಸಿತ್ತು.

ಈ ಅದ್ಧೂರಿ ಸಮಾರಂಭದಲ್ಲಿ ಸಿನಿಮಾ, ರಾಜಕೀಯ, ಉದ್ಯಮ ಹಾಗೂ ಕ್ರಿಕೆಟ್ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ತಮಿಳುನಾಡು ಮುಖ್ಯಮಂತ್ರಿ ವಿಜಯ್, ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ನವಜೋಡಿಗೆ ಶುಭ ಹಾರೈಸಿದರು.

ಇನ್ನು ಕ್ರಿಕೆಟ್ ಕ್ಷೇತ್ರದಿಂದ ಕೇನ್ ವಿಲಿಯಮ್ಸನ್, ಡೇನಿಯಲ್ ವೆಟ್ಟೋರಿ, ಡೇಲ್ ಸ್ಟೇನ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಆರತಕ್ಷತೆಯಲ್ಲಿ ಕಾವ್ಯಾ ಮಾರನ್ ಕೆಂಪು ಬಣ್ಣದ ಕಸೂತಿ ಉಡುಪಿನಲ್ಲಿ ಮಿಂಚಿದರೆ, ಅನಿರುದ್ಧ್ ಮರೂನ್ ಬಣ್ಣದ ಕಸೂತಿ ಜಾಕೆಟ್ ಹಾಗೂ ಕಪ್ಪು ಪ್ಯಾಂಟ್‌ನಲ್ಲಿ ಗಮನ ಸೆಳೆದರು. ನವಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.