ವಚನ ಪಿತಾಮಹ 12 ನೇ ಶತಮಾನದ ಭಕ್ತಿ ಭಂಡಾರಿ ಬಸವಣ್ಣ ವಿರುದ್ಧ ಅಮೆರಿಕಾ ನಿವಾಸಿ ರವಿ ಹಂಜ್ ಬರೆದಿರುವ ಪುಸ್ತಕ ʼಬಸವ ಮಂಟಪ ʼ ಇದೀಗ ವಿವಾದಕ್ಕೆ ಇಡಾಗಿದೆ. ಬಸನಣ್ಣನವರ ಧ್ಯೆಯಕ್ಕೆ, ವಚನ,ವ್ಯಕ್ತಿತ್ವಕ್ಕೆ ವಿರುದ್ದದವಾಗಿ ಈ ಪುಸ್ತಕ ಬರೆದಿದ್ದಾರೆ ಎಂದು ಲಿಂಗಾಯತರು ಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಸ್ಪಷ್ಟನೆ ನೀಡಿದ್ದಾರೆ.
ಕಳೆದುಎರಡು ವರ್ಷಗಳಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಅಂಕಣಗಳ ಆಧಾರದ ಮೇಲೆ ಈ ಪುಸ್ತಕ ರೂಪಿಸಲಾಗಿದೆ. ಪುಸ್ತಕದ ಸಂದರ್ಶನ ಮತ್ತು ಬರಹಗಳಲ್ಲಿ ವಿಶ್ವಗುರು ಬಸವಣ್ಣ ಹಾಗೂ ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನಕಾರಿ ಉಲ್ಲೇಖಗಳಿವೆ ಎಂಬ ಆರೋಪ ಕೇಳಿಬಂದಿದೆ.
ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆದ ನಂತರ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಪ್ರಕಟಿಸಲಾಗಿದ್ದು, ಈ ಸಂಬಂಧ ಲೇಖಕ ರವಿ ಹಂಜ್ ವಿರುದ್ಧ ಎಫ್ಐಆರ್ (FIR) ಕೂಡ ದಾಖಲಾಗಿದೆ.
ನಾನು ವಿಶ್ವಗುರು ಬಸವಣ್ಣನವರ ಭಕ್ತ. ನನ್ನ ಜೀವನದಲ್ಲಿ ಬಸವಣ್ಣನವರ ಬಗ್ಗೆ ಓದುತ್ತಾ ಬರೆಯುತ್ತಾ ವಚನಗಳನ್ನು ಅಧ್ಯಯನ ಮಾಡುತ್ತಾ ಬಂದಿದ್ದೇನೆ.ಕಳೆದ 40 ವರ್ಷಗಳಲ್ಲಿ ನಾನು ಈ ಕೆಲಸವನ್ನು ಅತ್ಯಂತ ಭಕ್ತಿ ಮತ್ತ್ತು ಶ್ರದ್ಧೆಯಿಂದ ಮಾಡಿದ್ದೇನೆ. ಆದ್ದರಿಂದ ಬಸವಣ್ಣವರ ವಿರುದ್ಧ ಯಾರೇ ಮಾತನಾಡಿದರು ಅದನ್ನು ನಾನು ಖಂಡಿಸುತ್ತೇನೆ.
ಪ್ರಸ್ತುತ ರವಿ ಹಂಜ ಅವರು ಆಡಿದ ಮಾತುಗಳು ನಾನು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಮೊದಲು ನನ್ನ ಗಮನಕ್ಕೆ ಬಂದಿರಲಿಲ್ಲ. ವಿಡಿಯೋವನ್ನು ಆಮೇಲೆ ನಾನು ನೋಡಿದೆ. ಅದರಲ್ಲಿ ತುಂಬಾ ಆಕ್ಷೇಪಾರ್ಹ ಭಾಷೆ ಹಾಗೂ ಮಾತುಗಳನ್ನು ಈತ ಆಡಿದ್ದಾರೆ.ಅದನ್ನು ಒಪ್ಪಲಾಗದು ಎಂದು ನನ್ನ ಮಾತಿನಲ್ಲಿ ಅಲ್ಲಿಯೇ ಉಲ್ಲೇಖಿಸಿದ್ದೇನೆ ಮತ್ತು ಈಗ ಖಂಡಿಸುತ್ತೇನೆ.
ಯಾವದೇ ಕಾರಣಕ್ಕೂ, ಬಸವಣ್ಣನವರು ಮತ್ತು ಎಲ್ಲ ಶಿವಶರಣರ ಬಗ್ಗೆ ಹಗುರಾದ /ಕೀಳು ಭಾಷೆಯಲ್ಲಿ ಮಾತನಾಡಿದರೆ ಅದು ತುಂಬ ಪಾಪದ ಕೆಲಸ, ಅದನ್ನು ತೀವ್ರವಾಗಿ ಖಂಡಿಸಲೇ ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಕಸಾಪ ನಿಟಕಪೂರ್ವ ಅಧ್ಯಕ್ಷ ಮನು ಬಳಿಗಾರ್ ಸ್ಷಷ್ಟನೆ ನೀಡಿದ್ದಾರೆ.






















