SK Home Ad
Home ಸಿನಿ ಮಿಲ್ಸ್ BBK13: ಬಿಗ್ ಬಾಸ್ ಮನೆಯಿಂದ ಹೊರಬಂದ ಸೋನಿಕಾಗೆ ಫ್ಯಾಮಿಲಿಯಿಂದ ಅದ್ಧೂರಿ ಸ್ವಾಗತ: ಶ್ವಾನ ಕಂಡು ಭಾವುಕ!

BBK13: ಬಿಗ್ ಬಾಸ್ ಮನೆಯಿಂದ ಹೊರಬಂದ ಸೋನಿಕಾಗೆ ಫ್ಯಾಮಿಲಿಯಿಂದ ಅದ್ಧೂರಿ ಸ್ವಾಗತ: ಶ್ವಾನ ಕಂಡು ಭಾವುಕ!

0
7

BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆ ಪ್ರವೇಶಿಸಿ ಸುಮಾರು 50 ದಿನಗಳ ಕಾಲ ಪಯಣ ನಡೆಸಿದ್ದ ಸೋನಿಕಾ ಗೌಡ, ಇದೀಗ ಎಲಿಮಿನೇಟ್ ಆಗಿ ಮನೆಗೆ ಮರಳಿದ್ದಾರೆ. ದೊಡ್ಮನೆಯಿಂದ ಹೊರಬಂದ ಮಗಳನ್ನು ಪೋಷಕರು, ಅಜ್ಜಿ, ಸಹೋದರ ಹಾಗೂ ಆತ್ಮೀಯ ಸ್ನೇಹಿತರು ಅತ್ಯಂತ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡಿದ್ದ ಸೋನಿಕಾ ಅವರ ತಾಯಿ, “ಅವಳಿಗೆ ಕಡಿಮೆ ಮಾತನಾಡಿದ್ದೇ ಮೈನಸ್ ಆಯಿತು ಸರ್. ಉಳಿದಂತೆ ಮನೆಯಲ್ಲಿ ಹೇಗಿದ್ದಳೋ ಹಾಗೆಯೇ ಸಹಜವಾಗಿದ್ದಳು” ಎಂದು ಭಾವುಕರಾಗಿದ್ದರು. ಬಳಿಕ ಮನೆಗೆ ಮರಳಿದ ಸೋನಿಕಾ ಅವರನ್ನು ಬಾಗಿಲಿಗೆ ಹೂವುಗಳನ್ನು ಹಾಸಿ, ವಿಶೇಷ ವೆಲ್‌ಕಮ್ ಕೇಕ್ ಕತ್ತರಿಸುವ ಮೂಲಕ ಕುಟುಂಬಸ್ಥರು ಹಾಗೂ ಗೆಳೆಯರು ಬರಮಾಡಿಕೊಂಡಿದ್ದಾರೆ. ಮನೆಯಲ್ಲಿದ್ದ ವಯಸ್ಸಾದ ತಮ್ಮ ಮುದ್ದಿನ ಶ್ವಾನವನ್ನು ಕಂಡ ತಕ್ಷಣ ಸೋನಿಕಾ ಎತ್ತಿ ಮುದ್ದಾಡಿ ಭಾವುಕರಾದರು. ತಂದೆ-ಮಗಳ ಬಾಂಧವ್ಯದ ಸುಂದರ ಕ್ಷಣಗಳು ಫೋಟೋಗಳಲ್ಲಿ ಸೆರೆಯಾಗಿವೆ.

ಮೂಲತಃ ಕೇರಳದವರಾದ ಸೋನಿಕಾ ಮುಂಬೈನಲ್ಲಿ ಬೆಳೆದು, ಸದ್ಯ ಬೆಂಗಳೂರಿನಲ್ಲಿ ಬೂಟಿಕ್ ಉದ್ಯಮ ನಡೆಸುತ್ತಿದ್ದಾರೆ. ಭರತನಾಟ್ಯ ಕಲಾವಿದೆಯೂ ಆಗಿರುವ ಇವರು, ಬಿಗ್ ಬಾಸ್ ಪಯಣದ ಬಳಿಕ ಕುಟುಂಬದ ಬೆಂಬಲದೊಂದಿಗೆ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭಿಸುವ ಕನಸು ಕಂಡಿದ್ದಾರೆ.