ನವದೆಹಲಿ: ಭಾರತೀಯ ಚೆಸ್ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಯಾಗಿದೆ. ಮಧ್ಯಪ್ರದೇಶದ ಅನುಜ್ ಶ್ರೀವಾಸ್ತವ ಅವರು ಭಾರತದ 100ನೇ ಚೆಸ್ ಗ್ರ್ಯಾಂಡ್ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.
ಫಿಲಿಪ್ಪೀನ್ಸ್ನಲ್ಲಿ ಭಾನುವಾರ ನಡೆದ ಏಳನೇ ASEAN Plus ವೈಯಕ್ತಿಕ ಓಪನ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಅನುಜ್ ಈ ಸಾಧನೆ ಮಾಡಿದ್ದಾರೆ.
1988ರಲ್ಲಿ ವಿಶ್ವನಾಥನ್ ಆನಂದ್ ಭಾರತದ ಮೊದಲ ಗ್ರ್ಯಾಂಡ್ಮಾಸ್ಟರ್ ಆಗಿದ್ದರು. ಇದೀಗ ಭಾರತ 100 ಗ್ರ್ಯಾಂಡ್ಮಾಸ್ಟರ್ಗಳ ಮೈಲಿಗಲ್ಲು ತಲುಪಿದೆ. ಈ ವರ್ಷದ ಜುಲೈನಿಂದ ನವೆಂಬರ್ವರೆಗೆ ಐವರು ಹೊಸ ಗ್ರ್ಯಾಂಡ್ಮಾಸ್ಟರ್ಗಳಾಗಿದ್ದಾರೆ.
ಹಾಲಿ ವಿಶ್ವ ಚೆಸ್ ಚಾಂಪಿಯನ್ ಡಿ. ಗುಕೇಶ್ ಈ ತಿಂಗಳ ಕೊನೆಯಲ್ಲಿ ತಮ್ಮ ವಿಶ್ವ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲಿಗೆ ಸಜ್ಜಾಗಿದ್ದಾರೆ. ಅನುಜ್ ಸಾಧನೆ ಯುವಕರಿಗೆ ಚೆಸ್ನಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿ ಎಂದು ಮೋದಿ ಆಶಿಸಿದ್ದಾರೆ.






















