SK Home Ad
Home ಸಿನಿ ಮಿಲ್ಸ್ ‘ಬಿಗ್ ಬಾಸ್ 13’: ಅತಿಥಿಯಾಗಿ ಮಂಜು ರೀ-ಎಂಟ್ರಿ; ಯಶಸ್‌, ಸೌಂದರ್ಯ, ತಾಂಡವ್‌ಗೆ ಟಾಂಗ್!

‘ಬಿಗ್ ಬಾಸ್ 13’: ಅತಿಥಿಯಾಗಿ ಮಂಜು ರೀ-ಎಂಟ್ರಿ; ಯಶಸ್‌, ಸೌಂದರ್ಯ, ತಾಂಡವ್‌ಗೆ ಟಾಂಗ್!

0
10

BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ದಿನಕ್ಕೊಂದು ಟ್ವಿಸ್ಟ್ ಎದುರಾಗುತ್ತಿದ್ದು, ಪ್ರೇಕ್ಷಕರ ಕೌತುಕ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಅಸಭ್ಯ ವರ್ತನೆಯಿಂದ ಗೇಟ್ ಪಾಸ್ ಪಡೆದಿದ್ದ ‘ಮಾಡರ್ನ್ ಮಹಾಕವಿ’ ಮಂಜು, ಇದೀಗ ಅತಿಥಿಯಾಗಿ ಮನೆಗೆ ಮರುಪ್ರವೇಶಿಸಿದ್ದಾರೆ. ಹೊರಗಿನ ಪ್ರಪಂಚದ ಸುದ್ದಿಗಳು ಹಾಗೂ ಟ್ರೆಂಡಿಂಗ್ ವಿಷಯಗಳ ಸುಳಿವು ನೀಡುವ ವಿಶೇಷ ಉದ್ದೇಶದಿಂದ ಬಿಗ್ ಬಾಸ್ ಅವರನ್ನು ಕರೆಸಿದ್ದು, ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ.

ಅತಿಥಿಯಾಗಿ ಬಂದ ಮಂಜು ತಮ್ಮ ವಿಶಿಷ್ಟ ಶೈಲಿಯಲ್ಲಿ ಸ್ಪರ್ಧಿಗಳಿಗೆ ಶೋಕ್ ನೀಡುತ್ತಿದ್ದಾರೆ. ಸೌಂದರ್ಯಾ ಅವರೊಂದಿಗೆ ಮಾತನಾಡುತ್ತಾ, “ನಿಮ್ಮ ಆಟದ ಸುದ್ದಿ ಮೂಲೆ ಮೂಲೆಗಳಲ್ಲೂ ನಡೀತಿದೆ” ಎಂದು ಹೊರಗಿನ ವಾತಾವರಣದ ಸುಳಿವು ನೀಡಿದ್ದಾರೆ. ಬಿಗ್ ಬಾಸ್ ಮಂಜು ಅವರಿಗೆ ಸ್ಪರ್ಧಿಗಳನ್ನು ಒನ್‌-ಟು-ಒನ್ ವಿಚಾರಣೆ ನಡೆಸುವ ಅಧಿಕಾರ ನೀಡಿರುವುದರಿಂದ ಪ್ರತಿಯೊಬ್ಬ ಸ್ಪರ್ಧಿಯೂ ಆತಂಕದಲ್ಲಿದ್ದಾರೆ.

ವಿಶೇಷವಾಗಿ ಸ್ಪರ್ಧಿ ಯಶಸ್ ಕೃಷ್ಣ ಮತ್ತು ಮಂಜು ನಡುವೆ ಹಳೆಯ ವೈಮನಸ್ಸಿನ ಕಿಡಿ ಮತ್ತೆ ಹೊತ್ತಿಕೊಂಡಿದೆ. ಹಿಂದೆ ‘ರಾಕ್ಷಸರು ಮತ್ತು ಗಂಧರ್ವರು’ ಟಾಸ್ಕ್‌ನಲ್ಲಿ ಯಶಸ್‌ ವಿರುದ್ಧ ನಿಂದನೀಯ ಪದ ಬಳಸಿದ್ದ ಕಾರಣಕ್ಕೇ ಮಂಜು ಎಲಿಮಿನೇಟ್ ಆಗಿದ್ದರು. ಮಂಜು ಹೊರಹೋದಾಗ ಯಶಸ್ ಪಾಯಸ ತಿಂದು ಸಂಭ್ರಮಿಸಿದ್ದರು. ಈಗ ಕಿರಣ್ ಶಾಸ್ತ್ರಿ “ಕ್ಷಮೆ ಕೇಳು” ಎಂದರೂ, ಯಶಸ್ ನೇರವಾಗಿ ಮಂಜು ಎದುರು ನಿಂತಿದ್ದಾರೆ.

ಯಶಸ್‌ ನೋಡಿದ ತಕ್ಷಣ ಮೀಸೆ ತಿರುವಿದ ಮಂಜು, “ನಿಮ್ಮ ಸ್ಮಾರ್ಟ್ ಗೇಮ್ ಮುಂದೆ ಯಾರದ್ದೂ ಏನೂ ನಡೆಯಲ್ಲ. ಸೌಂದರ್ಯ, ಆಸಿಯಾ, ಗಾನವಿ ಜೊತೆ ತಕ್ಕಡಿ ತೂಗುತ್ತಿದ್ದೀರಾ. ತುಂಬಾ ಆಯಾಸವಾದಂತಿದೆ, ಪಾಯಸ ಏನಾದರೂ ಬೇಕಾ?” ಎಂದು ನೇರವಾಗಿಯೇ ಛೇಡಿಸಿದ್ದಾರೆ. ಈ ಮಾತುಕತೆ ಮುಂದಿನ ನಾಮಿನೇಷನ್ ಪ್ರಕ್ರಿಯೆಯ ಮೇಲೆ ದೊಡ್ಡ ಪ್ರಭಾವ ಬೀರುವ ಲಕ್ಷಣ ಕಾಣಿಸುತ್ತಿದೆ.