SK Home Ad
Home ಸಿನಿ ಮಿಲ್ಸ್ ‘ಬಿಗ್ ಬಾಸ್ ಕನ್ನಡ 13’: ಮನೆಯೊಳಗೆ ಮಂಜ ರೀ-ಎಂಟ್ರಿ; ಕಿಚ್ಚ ಬಿಗ್‌ ಟ್ವಿಸ್ಟ್!

‘ಬಿಗ್ ಬಾಸ್ ಕನ್ನಡ 13’: ಮನೆಯೊಳಗೆ ಮಂಜ ರೀ-ಎಂಟ್ರಿ; ಕಿಚ್ಚ ಬಿಗ್‌ ಟ್ವಿಸ್ಟ್!

0
11

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋಗೆ ‘ಮಾಡರ್ನ್ ಮಹಾಕವಿ’ ಮಂಜ ವಾಪಸ್ ಬಂದಿದ್ದು, ಉಳಿದ ಸ್ಪರ್ಧಿಗಳಿಗೆ ಭಾರೀ ಅಚ್ಚರಿ ಕಾದಿದೆ. ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಸ್ಪರ್ಧಿಗಳ ವಿರುದ್ಧ ಅಸಭ್ಯ ಮಾತುಗಳನ್ನಾಡಿ ಗೇಟ್ ಪಾಸ್ ಪಡೆದಿದ್ದ ಮಂಜ ಅವರಿಗೆ, ಬಿಗ್ ಬಾಸ್ ತಂಡ ಇದೀಗ ಎರಡನೇ ಅವಕಾಶ ನೀಡಿದೆ.

ಆದರೆ, ಈ ಎರಡನೇ ಅವಕಾಶದಲ್ಲಿ ಮಂಜ ಅವರು ಸಾಮಾನ್ಯ ಸ್ಪರ್ಧಿಯಾಗಲಿ ಅಥವಾ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಲಿ ಅಲ್ಲ. ಬದಲಿಗೆ, ಅವರನ್ನು ಕೇವಲ Guest (ಅತಿಥಿ) ಮಾದರಿಯಲ್ಲಿ ಕಳುಹಿಸಲಾಗಿದ್ದು, ಸೀಸನ್ ಟ್ರೋಫಿ ಅಥವಾ ಕಪ್ ಗೆಲ್ಲುವ ಅವಕಾಶ ಅವರಿಗಿರುವುದಿಲ್ಲ. ಮಾನವೀಯತೆಯ ದೃಷ್ಟಿಯಿಂದ ಹಾಗೂ ತಮ್ಮ ವ್ಯಕ್ತಿತ್ವ ಬದಲಾಯಿಸಿಕೊಳ್ಳಲು ನಟ ಕಿಚ್ಚ ಸುದೀಪ್ ಅವರು ಮಂಜನಿಗೆ ಈ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಈ ವಿಷಯ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ತಿಳಿದಿಲ್ಲ ಮತ್ತು ಮಂಜ ಕೂಡ ಇದನ್ನು ಬಹಿರಂಗಪಡಿಸುವಂತಿಲ್ಲ ಎಂಬ ಒಪ್ಪಂದ ಮಾಡಿಕೊಳ್ಳಲಾಗಿದೆ.

ಮನೆಯೊಳಗೆ ಮತ್ತೆ ಹಳೆಯ ವರ್ತನೆ ತೋರಿದರೆ ಅಥವಾ ಅಸಭ್ಯ ಭಾಷೆ ಬಳಸಿದರೆ ಕೂಡಲೇ ‘ರೆಡ್ ಕಾರ್ಡ್’ ನೀಡಿ ಹೊರಹಾಕಲಾಗುವುದು ಎಂದು ಸುದೀಪ್ ಎಚ್ಚರಿಸಿದ್ದಾರೆ. ಮತ್ತೆ ತಪ್ಪು ಮಾಡುವುದಿಲ್ಲ ಎಂಬ ಭರವಸೆಯೊಂದಿಗೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಮಂಜ ಅವರ ಮುಂದಿನ ನಡೆಯನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.