ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 2024-25ನೇ ಸಾಲಿನ ಪಾಲಿಕೆ ಅನುದಾನದಡಿ ಆಯ್ಕೆಯಾದ 6 ಫಲಾನುಭವಿಗಳಿಗೆ ಶನಿವಾರ ಆಟೋರಿಕ್ಷಾಗಳನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿತರಿಸಿದರು.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಫಲಾನುಭವಿಗಳಿಗೆ ಆಟೋರಿಕ್ಷಾದ ಕೀ ಹಸ್ತಾಂತರಿಸಿ ಶುಭಾಶಯ ಕೋರಿದರು.
ಮಾಜಿ ಸಚಿವರಾದ ಬಿ. ಶ್ರೀರಾಮುಲು, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಪಾಲಿಕೆ ಸದಸ್ಯೆ ಶಾಂತಾ ಸಿ. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
ಆಟೋ ಪಡೆದವರು: ಜಗದೀಶ್ ಪೂಜಾರ್, ಸಾಗರ್ ಒಟಾರೆ, ಹರೀಶ್ ಗುಡಿ, ಬಸವರಾಜ ಚಡಚಾಳ, ರಾಜು ಭಜಂತ್ರಿ, ಸುರೇಶ ಅವರು ಆಟೋ ರಿಕ್ಷಾ ಪಡೆದ ಫಲಾನುಭವಿಗಳಾಗಿದ್ದಾರೆ.
ಕಾರ್ಯಕ್ರಮದಲ್ಲಿ ಶಿವಯ್ಯ ಹಿರೇಮಠ, ಬಸವರಾಜ್ ಜಾಬಿನ್, ವಿನಾಯಕ್ ಲದ್ವಾ, ಶಶಿಕಾಂತ್ ಬಿಜವಾಡ ಸೇರಿದಂತೆ ಅನೇಕ ಗಣ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.






















