SK Home Ad
Home ಸಿನಿ ಮಿಲ್ಸ್ ಬಿಗ್‌ ಬಾಸ್‌ನಲ್ಲಿ ಎಮೋಷನಲ್: ಪತ್ರ ಕಳೆದುಕೊಂಡರೂ ಗಾನವಿಯನ್ನು ತಬ್ಬಿ ಸಮಾಧಾನ ಮಾಡಿದ ಆಸಿಯಾ!

ಬಿಗ್‌ ಬಾಸ್‌ನಲ್ಲಿ ಎಮೋಷನಲ್: ಪತ್ರ ಕಳೆದುಕೊಂಡರೂ ಗಾನವಿಯನ್ನು ತಬ್ಬಿ ಸಮಾಧಾನ ಮಾಡಿದ ಆಸಿಯಾ!

0
11

BBK13: ‘ಬಿಗ್‌ ಬಾಸ್‌ ಕನ್ನಡ ಸೀಸನ್-13’ ಯಶಸ್ವಿಯಾಗಿ 54 ದಿನಗಳನ್ನು ಪೂರೈಸಿದ್ದು, ಈ ವಾರ ಸ್ಪರ್ಧಿಗಳಿಗೆ ತಮ್ಮ ಕುಟುಂಬದಿಂದ ಬಂದಿರುವ ಪತ್ರಗಳನ್ನು ಪಡೆಯುವ ವಿಶೇಷ ಹಾಗೂ ಭಾವುಕ ಅವಕಾಶ ನೀಡಲಾಗಿದೆ. ಆದರೆ ಮೊದಲ ದಿನವೇ ಮನೆಮಂದಿಯ ನಡುವೆ ನಡೆದ ವೋಟಿಂಗ್ ಟಾಸ್ಕ್‌ನಲ್ಲಿ ಆಸಿಯಾ ಫಿರ್ದೋಸ್ ತಮ್ಮ ಕುಟುಂಬದ ಪತ್ರವನ್ನು ಕಳೆದುಕೊಂಡಿದ್ದರೆ, ಗಾನವಿ ಗೌಡ ಪತ್ರವನ್ನು ಪಡೆದುಕೊಂಡಿದ್ದಾರೆ.

ಪತ್ರ ಪಡೆಯಲು ಬಿಗ್‌ ಬಾಸ್ ನೀಡಿದ ೫ ನಿಮಿಷಗಳ ಕಾಲಾವಕಾಶದಲ್ಲಿ ಗಾನವಿ ತಮ್ಮ ತಾಯಿಯ ಕಷ್ಟಗಳನ್ನು ನೆನೆದು, “ತಾಯಿ ಮೂವರು ಹೆಣ್ಣುಮಕ್ಕಳನ್ನು ಒಂಟಿಯಾಗಿ ಬೆಳೆಸಿದ್ದಾರೆ, ಅವರ ಕ್ಷೇಮ ತಿಳಿಯಲು ಅವಕಾಶ ಕೊಡಿ” ಎಂದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. ಇತ್ತ ಉಳಿದ 2 ನಿಮಿಷದಲ್ಲಿ ಮಾತನಾಡಿದ ಆಸಿಯಾ, “ಮಾನಸಿಕವಾಗಿ ಕುಗ್ಗಿರುವ ನನಗೆ ಈ ಪತ್ರ ಹೊಸ ಚೈತನ್ಯ ನೀಡುತ್ತದೆ” ಎಂದು ಭಾವುಕರಾದರು. ವೋಟಿಂಗ್ ವೇಳೆ ಗಾನವಿ ಕಣ್ಣೀರಿಡುವುದನ್ನು ಕಂಡು, ತಮ್ಮ ನಡುವಿನ ವೈಯಕ್ತಿಕ ದ್ವೇಷ ಬದಿಗಿಟ್ಟು ತಾವೇ ಮುಂದೆ ಹೋಗಿ ತಬ್ಬಿಕೊಂಡು ಸಮಾಧಾನ ಪಡಿಸಿದ ಆಸಿಯಾ ಅವರ ಮಾನವೀಯ ಗುಣ ವೀಕ್ಷಕರ ಮನಗೆದ್ದಿದೆ.

ಮನೆಯ ೯ ಸ್ಪರ್ಧಿಗಳ ಪೈಕಿ ಸೌಂದರ್ಯ ಶೆಟ್ಟಿ, ಕಿರಣ್‌ ಶಾಸ್ತ್ರಿ ಹಾಗೂ ಯಶಸ್‌ ಕೃಷ್ಣ ಮಾತ್ರ ಆಸಿಯಾಗೆ ಬೆಂಬಲ ವ್ಯಕ್ತಪಡಿಸಿದರು. ಬಹುತೇಕ ಸ್ಪರ್ಧಿಗಳು ಗಾನವಿ ಪರ ಮತ ಚಲಾಯಿಸಿದ್ದರಿಂದ ಆಸಿಯಾ ಅವರ ಪತ್ರ ನುಚ್ಚುನೂರಾಯಿತು. ಆದಾಗ್ಯೂ, ಪತ್ರ ಕಳೆದುಕೊಂಡ ನೋವಿನ ನಡುವೆಯೂ ಆಸಿಯಾ ತೋರಿದ ಉದಾರ ವ್ಯಕ್ತಿತ್ವಕ್ಕೆ ಹಾಗೂ ಗಾನವಿಯನ್ನು ಸಮಾಧಾನಪಡಿಸಿದ ದೃಶ್ಯಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.