ಬೆಂಗಳೂರು: ಬೆಂಗಳೂರು ಮತ್ತು ಮುಂಬೈ ಮಹಾನಗರಗಳ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭವಾಗಲಿದೆ.
ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (ಸಿಎಸ್ಎಂಟಿ) ಮುಂಬೈ ನಡುವೆ ಈ ಸೇವೆ ಲಭ್ಯವಾಗಲಿದೆ.
ನ. 1ರಂದು ಮಧ್ಯಾಹ್ನ 12:15 ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ (ರೈಲು ಸಂಖ್ಯೆ 06503) ಹೊರಟು, ಮರುದಿನ ಬೆಳಿಗ್ಗೆ 6:15 ಕ್ಕೆ ಮುಂಬೈ ತಲುಪಲಿದೆ. 16 ಬೋಗಿಗಳ ಈ ರೈಲು ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ರಾಯಚೂರು, ಯಾದಗಿರಿ, ಕಲಬುರಗಿ, ಸೋಲಾಪುರ, ಪುಣೆ, ಲೋನಾವಾಲ, ಕಲ್ಯಾಣ್ ಮಾರ್ಗವಾಗಿ ಸಂಚರಿಸಲಿದೆ.
ನ. 3ರಿಂದ ನಿಯಮಿತ ಸೇವೆ – ವಾರದಲ್ಲಿ 6 ದಿನ: ಬೆಂಗಳೂರು – ಮುಂಬೈ (ರೈಲು ಸಂಖ್ಯೆ-27652) ಪ್ರತಿ ಸೋಮವಾರ ಹೊರತುಪಡಿಸಿ – ಸಂಜೆ 7.45 ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ 11.55 ಕ್ಕೆ ಮುಂಬೈ ತಲುಪಲಿದೆ.
ಮುಂಬೈ-ಬೆಂಗಳೂರು (27651): ಪ್ರತಿ ಮಂಗಳವಾರ ಹೊರತುಪಡಿಸಿ – ರಾತ್ರಿ 8:10 ಕ್ಕೆ ಮುಂಬೈನಿಂದ ಹೊರಟು ಮರುದಿನ ಮಧ್ಯಾಹ್ನ 12.00 ಕ್ಕೆ ಬೆಂಗಳೂರು ತಲುಪಲಿದೆ. ಈ 16 ಬೋಗಿಗಳ ಸ್ಲೀಪರ್ ರೈಲು ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ರಾತ್ರಿ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲಿದೆ.




















