SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಸಕ್ಕರೆ ಕಾರ್ಖಾನೆಗಳ ಗೋದಾಮುಗಳಿಗೆ ಬೀಗ

ಸಕ್ಕರೆ ಕಾರ್ಖಾನೆಗಳ ಗೋದಾಮುಗಳಿಗೆ ಬೀಗ

0
4

ಬೆಳಗಾವಿ: `ಕಬ್ಬಿಗೆ ಬೆಲೆ ನಿಗದಿಯಾಗುವವರೆಗೆ ಕಾರ್ಖಾನೆಗಳ ಗೋದಾಮುಗಳಿಂದ ಸಕ್ಕರೆ ಹೊರಹೋಗಲು ಬಿಡುವುದಿಲ್ಲ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಎಚ್ಚರಿಸಿದ್ದು, ರಾಜ್ಯದಾದ್ಯಂತ ಸಕ್ಕರೆ ದಾಸ್ತಾನು ಗೋದಾಮುಗಳಿಗೆ ಬೀಗ ಹಾಕುವಂತೆ ಕಬ್ಬು ಬೆಳೆಗಾರರಿಗೆ ಕರೆ ನೀಡಿದ್ದಾರೆ.

ಕಬ್ಬಿಗೆ ಟನ್‌ಗೆ 4500 ರೂ. ಬೆಲೆ ನೀಡಬೇಕು ಎಂದು ಒತ್ತಾಯಿಸಿರುವ ಅವರು, ಬೆಲೆ ನಿಗದಿಗೂ ಮುನ್ನ ಸಕ್ಕರೆ ಸಾಗಣೆಗೆ ಅವಕಾಶ ನೀಡಬಾರದು. ಈ ಹೋರಾಟದಲ್ಲಿ ರೈತರು ಪಕ್ಷಭೇದ ಮರೆತು ಭಾಗವಹಿಸಬೇಕು ಎಂದು ಬುಧವಾರ ಮನವಿ ಮಾಡಿದ್ದಾರೆ.

‘ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಮೊದಲು ಕಬ್ಬಿನ ಬೆಲೆ ನಿಗದಿಯಾಗಬೇಕು. ನಂತರ ಸಕ್ಕರೆ ಸಾಗಿಸಲಿ. ಅಲ್ಲಿಯವರೆಗೆ ಗೋದಾಮು ಬಂದ್, ಸಕ್ಕರೆ ಸಾಗಣೆಯೂ ಬಂದ್’ ಎಂದು ಹೇಳಿದ್ದಾರೆ.

ರೈತ ಸಂಘದ ಸಲಹಾ ಸಮಿತಿಯ ಸೂಚನೆಯಂತೆ ಈ ಚಳವಳಿಗೆ ಕರೆ ನೀಡಲಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಯಾದಗಿರಿ, ಕಲಬುರಗಿ ಸೇರಿದಂತೆ ಮಂಡ್ಯ, ಮೈಸೂರು ಭಾಗದ ಕಬ್ಬು ಬೆಳೆಗಾರರೂ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಕೋರಿದ್ದಾರೆ.