SK Home Ad
Home ಸಿನಿ ಮಿಲ್ಸ್ ಬಿಗ್‌ಬಾಸ್ ಮನೆಯಲ್ಲಿ ‘ಶೆಟ್ಟಿ ಡಾನ್’ ಮದುವೆ ದರ್ಬಾರ್; ಸೌಂದರ್ಯ ಮದುವೆಯಾಗಲು ಮುಗಿಬಿದ್ದ ಗಂಡುಗಳು!

ಬಿಗ್‌ಬಾಸ್ ಮನೆಯಲ್ಲಿ ‘ಶೆಟ್ಟಿ ಡಾನ್’ ಮದುವೆ ದರ್ಬಾರ್; ಸೌಂದರ್ಯ ಮದುವೆಯಾಗಲು ಮುಗಿಬಿದ್ದ ಗಂಡುಗಳು!

0
46

BBK13: ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಮಾಸ್, ಕಾಮಿಡಿ ಮತ್ತು ಅದ್ಧೂರಿ ಮನರಂಜನೆಯ ಮಹಾಪರ್ವವೇ ಆರಂಭವಾಗಿದೆ. ಮನೆಯ ಖಡಕ್ ಬೆಡಗಿ ಸೌಂದರ್ಯ ಶೆಟ್ಟಿಗೆ ಮದುವೆ ಮಾಡಿಸಲು ಬಿಗ್‌ಬಾಸ್ ವಿಶೇಷ ಟಾಸ್ಕ್ ನೀಡಿದ್ದು, ಇಡೀ ಬಿಗ್‌ಬಾಸ್ ಮನೆ ಮದುವೆ ಮನೆಯಾಗಿ ಬದಲಾಗಿದೆ.

ಈ ಟಾಸ್ಕ್‌ನಲ್ಲಿ ಸೌಂದರ್ಯ ಸಾಮಾನ್ಯ ಹೆಣ್ಣುಮಗಳಂತೆ ನಾಚುವ ಬದಲು, ಕೈಯಲ್ಲಿ ಮಚ್ಚು ಹಾಗೂ ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿ ‘ಶೆಟ್ಟಿ ಡಾನ್’ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮಗಳಿಗೆ ಮದುವೆ ಎಂದರೆ ಇಷ್ಟವಿಲ್ಲದಿದ್ದರೂ, ತಂದೆ ತಾಂಡವ್ ಹಾಗೂ ತಾಯಿ ಪ್ರಶಾಂತ್ ಹೇಗಾದರೂ ಮಾಡಿ ವರನನ್ನು ಹುಡುಕಿ ಮದುವೆ ಮಾಡಲು ಪಣತೊಟ್ಟಿದ್ದಾರೆ. ‘ಶೆಟ್ಟಿ ಡಾನ್’ ಮನಸ್ಸನ್ನು ಗೆದ್ದು ಮದುವೆಯಾಗಲು ಮನೆಯ ಯುವಕರಾದ ಯಶಸ್ ಮತ್ತು ಗಗನ್ ವರರಾಗಿ ಕಣಕ್ಕಿಳಿದಿದ್ದಾರೆ.

ವರ ಯಶಸ್ ಕೃಷ್ಣ ಪರವಾಗಿ ಸೋನಿಕಾ, ತಂದೆ ಜಗದೀಶ್, ಕುಮಾರಿ ಹಾಗೂ ಗಾನವಿ ಕುಟುಂಬಸ್ಥರಾಗಿ ಸಾಥ್ ನೀಡಿದ್ದರೆ, ಇನ್ನೊಬ್ಬ ವರ ಗಗನ್ ಪರವಾಗಿ ತಂದೆ ಕಿರಣ್ ಶಾಸ್ತ್ರಿ, ಆಸಿಯಾ ಹಾಗೂ ಧನುಷ್ ಕುಟುಂಬಸ್ಥರ ಪಾತ್ರದಲ್ಲಿದ್ದಾರೆ. ಮದುವೆ ಮಾತುಕತೆ ವೇಳೆ ಹಿರಿಯರ ಹಾಸ್ಯ ಚಟಾಕಿ, ವರಗಳ ತಮಾಷೆಯ ಡೈಲಾಗ್‌ಗಳು ಹಾಗೂ ಸೌಂದರ್ಯ ಅವರ ಖಡಕ್ ಶೈಲಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ. ಅಂತಿಮವಾಗಿ ಈ ಮಾಸ್ ಶೆಟ್ಟಿ ಡಾನ್ ಯಾರಿಗೆ ಜೈಮಾಲೆ ಹಾಕಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.