SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ 2028ಕ್ಕೆ ನಾನು ಚುನಾವಣೆಗೆ ನಿಲ್ಲಲ್ಲ: ಐಜಿಪಿ ಎದುರಲ್ಲೇ ಎಸ್ಪಿಗೆ ಶಾಸಕ ಪಪ್ಪಿ ಕ್ಲಾಸ್

2028ಕ್ಕೆ ನಾನು ಚುನಾವಣೆಗೆ ನಿಲ್ಲಲ್ಲ: ಐಜಿಪಿ ಎದುರಲ್ಲೇ ಎಸ್ಪಿಗೆ ಶಾಸಕ ಪಪ್ಪಿ ಕ್ಲಾಸ್

0
116

ಚಿತ್ರದುರ್ಗ: ಸಿರಿಗೆರೆ ಹೆಲಿಪ್ಯಾಡ್ ಬಳಿ ಚಿತ್ರದುರ್ಗದ ಎಸ್ಪಿ ರಂಜಿತ್ ಬಂಡಾರು ವಿರುದ್ಧ ಚಿತ್ರದುರ್ಗ ಶಾಸಕ ಕೆ.ಸಿ. ವಿರೇಂದ್ರ ಪಪ್ಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ವೇದಿಕೆ ಬಳಿಗೆ ತಮ್ಮ ಕಾರನ್ನು ಬಿಡದೆ ಪೊಲೀಸರು ಅಡ್ಡ ಹಾಕಿದ್ದಕ್ಕೆ ಸಿಟ್ಟಿಗೆದ್ದ ಶಾಸಕರು, ಸ್ಥಳದಲ್ಲೇ ಎಸ್ಪಿ ವಿರುದ್ಧ ಕಿಡಿಕಾರಿದ್ದಾರೆ. ಕಾರ್ಯಕ್ರಮ ಮಾಡೋದು ನಾವು, ನಿಯಮ ಮಾಡೋದು ನೀವು. ನಮ್ಮನ್ನ ಏನು ಅಂದುಕೊಂಡಿದ್ದೀರಿ? ಕಾರ್ಯಕ್ರಮ ಮಾಡೋದು ನಾವು, ನೀವು ನಿಯಮ ಮಾಡ್ತೀರಾ? ನಾನು ವೇದಿಕೆ ಹತ್ತಲ್ಲ, ನೀವೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಎಸ್ಪಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಬಾರಿ ಸಿಎಂ ಬಂದಾಗ ನಾನು 2 ಕಿ.ಮೀ ನಡೆದು ಬಂದಿದ್ದೇನೆ. ನೀವು ನಿಮ್ಮ ವಾಹನ ದೂರ ಹಾಕಿ ನಡೆದು ಬನ್ನಿ ನೋಡೋಣ ಎಂದು ಸವಾಲು ಹಾಕಿದರು.

ಪೂರ್ವ ವಲಯ ಐಜಿಪಿ ಎದುರಲ್ಲೇ ಎಸ್ಪಿ ರಂಜಿತ್ ಬಂಡಾರುಗೆ ಶಾಸಕ ವಿರೇಂದ್ರ ಪಪ್ಪಿ ತರಾಟೆಗೆ ತೆಗೆದುಕೊಂಡರು. ಇದೇ ವೇಳೆ, ಕೆಲಸಕ್ಕೆ ಬಾರದ ತಹಸೀಲ್ದಾರ್, ಎಸ್ಪಿ ಗಾಡಿ ಮುಂದೆ ನಿಲ್ಲಿಸ್ತೀರಿ, ನಮ್ಮ ಕಾರು ದೂರ ನಿಲ್ಲಿಸಿ ನಾವು ಓಡಿಕೊಂಡು ಬರಬೇಕಾ? ಎಂದು ಪ್ರಶ್ನಿಸಿದರು.

ಆಕ್ರೋಶದ ನಡುವೆಯೇ ನಾನೇನು 2028ಕ್ಕೆ ಚುನಾವಣೆ ನಿಲ್ಲಲ್ಲ ಎಂದು ಸಿಟ್ಟಿನಲ್ಲಿ ಮಾತನಾಡಿದರು. ಸಿರಿಗೆರೆ ಹೆಲಿಪ್ಯಾಡ್ ಬಳಿ ನಡೆದ ಈ ಘಟನೆ ಈಗ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.