ನವದೆಹಲಿ: ರಿಲಯನ್ಸ್ ಮತ್ತು ಡಿಸ್ನಿ ಬೆಂಬಲಿತ ಸ್ಟ್ರೀಮಿಂಗ್ ವೇದಿಕೆ JioHotstar ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಸೆಪ್ಟೆಂಬರ್ 2ರಿಂದ ಯುನೈಟೆಡ್ ಕಿಂಗ್‌ಡಮ್, ಕೆನಡಾ ಮತ್ತು ಸಿಂಗಾಪುರದಲ್ಲಿ Hotstar ಆ್ಯಪ್‌ನ ಬದಲಿಗೆ JioHotstar ಸೇವೆ ಲಭ್ಯವಾಗಲಿದೆ.
JioHotstar ಮೂಲಕ ಒಂದು ಡಜನ್‌ಗಿಂತಲೂ ಹೆಚ್ಚು ಭಾಷೆಗಳಲ್ಲಿ ಸುಮಾರು 1.6 ಲಕ್ಷ ಗಂಟೆಗಳ ಕಂಟೆಂಟ್ ವೀಕ್ಷಿಸಲು ಅವಕಾಶ ದೊರೆಯಲಿದೆ. ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ವೆಬ್ ಸೀರೀಸ್‌ಗಳು, ಮೂಲ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಮನರಂಜನಾ ಕಂಟೆಂಟ್‌ಗಳು ವೇದಿಕೆಯಲ್ಲಿ ಲಭ್ಯವಿರಲಿವೆ.
ಇದರೊಂದಿಗೆ ಜನಪ್ರಿಯ ‘ಬಿಗ್ ಬಾಸ್’ ಕಾರ್ಯಕ್ರಮದ 24/7 ಲೈವ್ ಸ್ಟ್ರೀಮ್ ಕೂಡ ಪ್ರಮುಖ ಆಕರ್ಷಣೆಯಾಗಲಿದೆ. ವೀಕ್ಷಕರು ಕಾರ್ಯಕ್ರಮದ ಸಂದರ್ಭದಲ್ಲಿ ಲೈವ್ ಮತದಾನದಲ್ಲೂ ಭಾಗವಹಿಸುವ ಅವಕಾಶವನ್ನು ಪಡೆಯಲಿದ್ದಾರೆ. ಕೆನಡಾದ ಬಳಕೆದಾರರಿಗೆ ಕೆಲವು ಕಂಟೆಂಟ್‌ಗಳಿಗೆ ಆರಂಭಿಕ ಪ್ರವೇಶದ ಸೌಲಭ್ಯವೂ ಇರಲಿದೆ.
ಅಂತಾರಾಷ್ಟ್ರೀಯ ಬಳಕೆದಾರರಿಗೆ ಚಂದಾದಾರಿಕೆ ಯೋಜನೆಗಳು ದೇಶಕ್ಕೆ ಅನುಗುಣವಾಗಿ ಲಭ್ಯವಿದ್ದು, ಯುಕೆಯಲ್ಲಿ ತ್ರೈಮಾಸಿಕ ಯೋಜನೆಗಳು £19.99ರಿಂದ ಆರಂಭವಾಗುತ್ತವೆ. ಈಗಾಗಲೇ Hotstar ಬಳಸುತ್ತಿರುವ ಬಳಕೆದಾರರಿಗೆ ಹೊಸ ವೇದಿಕೆಗೆ ಪರಿವರ್ತನೆ ಸುಗಮವಾಗುವಂತೆ ಲಾಗಿನ್ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಭಾರತೀಯ ಸಿನಿಮಾ, ಧಾರಾವಾಹಿ, ಕ್ರೀಡೆ ಹಾಗೂ ವಿವಿಧ ಭಾಷೆಗಳ ಮನರಂಜನಾ ಕಾರ್ಯಕ್ರಮಗಳಿಗೆ ವಿದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು JioHotstar ತನ್ನ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಮುಂದಿನ ದಿನಗಳಲ್ಲಿ ವೇದಿಕೆಗೆ ವಾರ್ಷಿಕವಾಗಿ ಸುಮಾರು 30,000 ಗಂಟೆಗಳ ಹೊಸ ಕಂಟೆಂಟ್ ಸೇರ್ಪಡೆಯಾಗುವ ನಿರೀಕ್ಷೆಯಿದ್ದು, ಜಾಗತಿಕ ಭಾರತೀಯ ಪ್ರೇಕ್ಷಕರನ್ನು ಸೆಳೆಯುವಲ್ಲಿ JioHotstar ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















