SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಮದ್ಯದ ನಶೆಯಲ್ಲಿ ಬಾರ್ ಸಪ್ಲೈಯರ್‌ಗೆ ಕುರ್ಚಿಯಿಂದ ಹಲ್ಲೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮದ್ಯದ ನಶೆಯಲ್ಲಿ ಬಾರ್ ಸಪ್ಲೈಯರ್‌ಗೆ ಕುರ್ಚಿಯಿಂದ ಹಲ್ಲೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

0
100

ದಾವಣಗೆರೆ: ಮದ್ಯ ಸೇವಿಸಿದ್ದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಬಾರ್ ಸಪ್ಲೈಯರ್‌ ಮೇಲೆ ಏಕಾಏಕಿ ಕುರ್ಚಿ ಎತ್ತಿ ಹಾಕಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆಯ ಶಾಬನೂರು ರಸ್ತೆಯ ಪವನ್ ಬಾರ್‌ನಲ್ಲಿ ನಡೆದಿದೆ.

ಬಾರ್‌ಗೆ ಮದ್ಯ ಸೇವಿಸಲು ಬಂದಿದ್ದ ವ್ಯಕ್ತಿ, ಅಲ್ಲಿ ಕೆಲಸ ಮಾಡುತ್ತಿದ್ದ ಸಪ್ಲೈಯರ್ ಸಿದ್ದೇಶ ಎಂಬುವವರೊಂದಿಗೆ ಏಕಾಏಕಿ ಜಗಳ ತೆಗೆದು, ಕುರ್ಚಿಯನ್ನು ಎತ್ತಿ ಅವರ ತಲೆಗೆ ಹಾಕಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ಸಿದ್ದೇಶ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರವಾಗಿ ರಕ್ತಸ್ರಾವವಾಗಿದೆ. ತಕ್ಷಣ ಬಾರ್ ಮಾಲೀಕರು ಹಾಗೂ ಸಿಬ್ಬಂದಿ ಗಾಯಾಳು ಸಿದ್ದೇಶ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಹಲ್ಲೆ ನಡೆಸಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮದ್ಯದ ಅಮಲಿನಲ್ಲಿ ಸಪ್ಲೈಯರ್ ಮೇಲೆ ಕುರ್ಚಿ ಎತ್ತಿ ಹಾಕಿ ಹಲ್ಲೆ ನಡೆಸುವುದು ಹಾಗೂ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಬಾರ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.