SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಹೊಸ ಧರ್ಮದ ಚಿಂತನೆಗೆ ರಾಯರಡ್ಡಿ ಕೊಟ್ಟ ಕಾರಣವೇನು?

ಹೊಸ ಧರ್ಮದ ಚಿಂತನೆಗೆ ರಾಯರಡ್ಡಿ ಕೊಟ್ಟ ಕಾರಣವೇನು?

0
95

ಕೊಪ್ಪಳ: ಹೊಸ ಧರ್ಮ ಸ್ಥಾಪನೆ ಮಾಡುತ್ತೇನೆ. ಎಲ್ಲ ಒಳ್ಳೆಯ ವಿಚಾರ ಇಟ್ಟುಕೊಂಡು, ಹೊಸ ಧರ್ಮ ಯಾಕೆ ಸ್ಥಾಪನೆ ಮಾಡಬಾರದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಯಲಬುರ್ಗಾ ತಾಲ್ಲೂಕಿನ ಬೋದೂರು ಗ್ರಾಮದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನದೇ ಒಂದು ಧರ್ಮ ಇದೆ. ನಾನೇ ಯಾಕೆ ಒಂದು ಧರ್ಮ ಮಾಡಬಾರದು. ನನಗೆ ಫಾಲೋವರ್ಸ್ ಇಲ್ಲವೆಂದು ಸುಮ್ಮನಿದ್ದೇನೆ. ನಾನು ಎಲ್ಲ ಧರ್ಮದ ಸಾರಾಂಶಗಳನ್ನು ಓದಿದ್ದೇನೆ ಎಂದರು.

ನನ್ನ ಜೊತೆ ಹಿಂದೂ ಧರ್ಮದವರು ಚರ್ಚೆ ಇಡಲಿ ನೋಡೋಣ. ಯಾರ ಬರುತ್ತಾರೆ ನನ್ನ ಜೊತೆ ಚರ್ಚೆಗೆ. ಸುನೀಲ್ ಕುಮಾರ್, ಆರ್. ಅಶೋಕಗೆ ಹೇಳಿ, ಹಿಂದು ಧರ್ಮ ಜನರಿಂದ ಆಗಿರುವುದು. ಹಿಂದೂ ಧರ್ಮದ ಸ್ಥಾಪಕರು ಯಾರು ಅಂತ ಹೇಳಲಿ. ನಾನು ಶರಣ ತತ್ವಗಳನ್ನು ಒಪ್ಪಿಕೊಂಡವನು. ನಾನು ಯಾವುದೇ ಧರ್ಮ, ಹಿಂದೂ ಧರ್ಮ ಕೆಟ್ಟದ್ದು ಅಂತ ಹೇಳಿಲ್ಲ. ನಿಜವಾಗಿಯೂ ನಾನೇ ಯಾಕೆ ಒಂದು ಧರ್ಮ ಮಾಡಬಾರದು ಎಂದು ಯೋಚನೆ ಮಾಡುತ್ತಿದ್ದೇನೆ. ಎಲ್ಲ ಸೇರಿಸಿ, ಒಂದು ಒಳ್ಳೆಯ ಧರ್ಮ ಯಾಕೆ ಮಾಡಬಾರದು ಎಂದರು.

ಸುನೀಲಕುಮಾರ, ಆರ್. ಅಶೋಕ ನನ್ನ ಸ್ನೇಹಿತರು: ಬಿಜೆಪಿ ನಾಯಕರಾದ ಸುನೀಲಕುಮಾರ್, ಆರ್. ಆಶೋಕ ನನ್ನ ಫ್ರೆಂಡ್ಸ್. ನಾನು ಯಾವುದೇ ಧರ್ಮ ಕೆಟ್ಟದ್ದು ಎಂದು ಹೇಳಿಲ್ಲ. ನಾನು ಕುರಾನ್‌ನಲ್ಲಿನ ಮ್ಯಾನ್ ಕೈಂಡ್ ಎಂದು ಇದೆ. ಅದರ ಬಗ್ಗೆ ಹೇಳಿದ್ದೇನೆ. ಅದರರ್ಥ ಹಿಂದು ಧರ್ಮ ಕೆಟ್ಟದ್ದು ಎಂದು ಹೇಳಿಲ್ಲ. ನಾನು ಎಲ್ಲ ಧರ್ಮದ ಸ್ಥಳಗಳಿಗೂ ಸ್ಟಡಿ ಮಾಡಲು ಹೋಗಿದ್ದೇನೆ. ನಾನು ಮೆಕ್ಕಾಗೆ ಹೋಗಬೇಕೆಂದು ಹೇಳಿದ್ದೇನೆ. ಆದರೆ ಆಗುವುದಿಲ್ಲೆಂದು ಹೇಳಿದ್ದು, ಅಲ್ಲಿಗೆ ಹೋಗಲು ಮತಾಂತರ ಆಗಬೇಕು. ನಾನು ಮತಾಂತರ ಆಗುವುದಿಲ್ಲ ಎಂದರು.

ಈಶ್ವರಪ್ಪ ಅಯೋಗ್ಯರ ಕೈನಲ್ಲಿ ಶಿಕ್ಷಣ ಖಾತೆ ಕೊಟ್ಟಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಏನಾದರೂ ಹೇಳಲಿ, ಇನ್ನೊಬ್ಬರನ್ನು, ಮುಸ್ಲಿಂರನ್ನು ಹೊಗಳಿದರೆ ಅವರಿಗೆ ನಾವು ಅಯೋಗ್ಯರು. ನಾನು ಯಾವುದೇ ಧರ್ಮಕ್ಕೆ ಸೇರಿದವನಲ್ಲ, ಇದು ಸ್ಪಷ್ಟವಾಗಿ ಹೇಳುತ್ತೇನೆ. ಎಲ್ಲ ಧರ್ಮದ ಬಗ್ಗೆ ಸ್ಟಡಿ ಮಾಡಿದ್ದೇನೆ. ಎಲ್ಲ ಧರ್ಮ ಶ್ರೇಷ್ಠ ಇದೆ. ಎಲ್ಲ ಧರ್ಮದ ಬಗ್ಗೆ ಗೌರವ ಇದೆ. ಯಾರು ಯಾವುದೇ ಧರ್ಮ ಆಚರಣೆ ಮಾಡಲಿ ನನ್ನ ವಿರೋಧ ಇಲ್ಲ. ಅವರು ರಾಜೀನಾಮೆ ಕೇಳುತ್ತಾರೆ ಎಂದರೆ ಕೇಳಲಿ. ಅವರಿಗೆ ನಾನು ಉತ್ತರ ಕೊಡುತ್ತೇನೆ. ನಾನು ಯಾವ ಧರ್ಮಕ್ಕೂ ಸೇರದವನು ಎಂದರು.