SK Home Ad
Home ಕ್ರೀಡೆ England vs Pakistan: ಇಂಗ್ಲೆಂಡ್ ವೇಗಿಗಳಿಗೆ ಹೆದರಿ ಗಾಯದ ನಾಟಕವಾಡಿದ್ರಾ ಪಾಕ್ ಬ್ಯಾಟರ್? ತಂಡದಲ್ಲಿ ಭುಗಿಲೆದ್ದ...

England vs Pakistan: ಇಂಗ್ಲೆಂಡ್ ವೇಗಿಗಳಿಗೆ ಹೆದರಿ ಗಾಯದ ನಾಟಕವಾಡಿದ್ರಾ ಪಾಕ್ ಬ್ಯಾಟರ್? ತಂಡದಲ್ಲಿ ಭುಗಿಲೆದ್ದ ಬಿಕ್ಕಟ್ಟು

0
149

England vs Pakistan:  ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿರುವ ಪಾಕಿಸ್ತಾನ ತಂಡದಲ್ಲಿ ಈಗ ಆಂತರಿಕ ಬಿಕ್ಕಟ್ಟು ಸ್ಫೋಟಗೊಂಡಿದೆ. ಆತಿಥೇಯರ ಘಾತಕ ವೇಗದ ಬೌಲಿಂಗ್ ಎದುರಿಸಲು ಹೆದರಿ ಹಿರಿಯ ಬ್ಯಾಟರ್ ಇಮಾಮ್-ಉಲ್-ಹಕ್ ‘ಗಾಯದ ನಾಟಕ’ವಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನಿಖೆಗೆ ಆದೇಶಿಸಿದೆ.

ಲಾರ್ಡ್ಸ್ ಟೆಸ್ಟ್ ವೇಳೆ ಇಮಾಮ್ ಕಾಲಿನ ನೋವಿನ ನೆಪ ಹೇಳಿ ಬ್ಯಾಟಿಂಗ್‌ನಿಂದ ದೂರ ಉಳಿದಿದ್ದರು. ಆದರೆ ಸ್ಕ್ಯಾನಿಂಗ್ ವರದಿಯಲ್ಲಿ ಗಾಯ ಅಷ್ಟೇನೂ ಗಂಭೀರವಾಗಿಲ್ಲ ಎಂಬುದು ದೃಢಪಟ್ಟಿದೆ. ಈ ಹಿಂದೆಯೂ ನ್ಯೂಜಿಲೆಂಡ್ ವಿರುದ್ಧ ಇಮಾಮ್ ಇದೇ ರೀತಿ ಪೆನ್ನಿನ ಗುರುತನ್ನು ಗಾಯವೆಂದು ಬಿಂಬಿಸಿ ಸಿಕ್ಕಿಬಿದ್ದಿದ್ದರು. ಇದರಿಂದ ಕೆಂಡಾಮಂಡಲವಾಗಿರುವ ಪಿಸಿಬಿ, ಇಮಾಮ್ ಮತ್ತು ಕಳಪೆ ಫಾರ್ಮ್‌ನಲ್ಲಿರುವ ಮೊಹಮ್ಮದ್ ರಿಜ್ವಾನ್ ಅವರನ್ನು ಕೂಡಲೇ ತವರಿಗೆ ವಾಪಸ್ ಕಳುಹಿಸಲು ನಿರ್ಧರಿಸಿದೆ.

ಸರಣಿ ಸೋಲಿನ ಬೆನ್ನಲ್ಲೇ ಪಾಕ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ಮೈಕ್ ಹೆಸನ್ ಅವರನ್ನು ಕೊನೆಯ ಟೆಸ್ಟ್‌ಗೆ ಕೋಚ್ ಆಗಿ ನೇಮಿಸಲಾಗಿದೆ. ಸೈಮ್ ಅಯೂಬ್ ಸೇರಿದಂತೆ ಆರು ಹೊಸ ಆಟಗಾರರು ತಂಡ ಸೇರಲಿದ್ದಾರೆ. ತಂಡದ ಹೀನಾಯ ಪ್ರದರ್ಶನದ ನಡುವೆಯೂ ಅಧಿಕಾರಿಗಳು ಲಂಡನ್‌ನಲ್ಲಿ ಔತಣಕೂಟಗಳಲ್ಲಿ ಭಾಗಿಯಾಗುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.