SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಕನ್ನಡ 13: ‘ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ಹಂಗಾಮಾ; ಅಸಮಾಧಾನದಲ್ಲೇ ಪೂರ್ಣಿಮಾ ವಾಕ್ಔಟ್?

ಬಿಗ್ ಬಾಸ್ ಕನ್ನಡ 13: ‘ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ಹಂಗಾಮಾ; ಅಸಮಾಧಾನದಲ್ಲೇ ಪೂರ್ಣಿಮಾ ವಾಕ್ಔಟ್?

0
65

ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 13’ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಬಾರಿ ಸಾಮಾನ್ಯ ಜನರಿಗೂ ದೊಡ್ಮನೆ ಪ್ರವೇಶಿಸಲು ಅವಕಾಶ ನೀಡಲಾಗಿದ್ದು, ಇದಕ್ಕಾಗಿ ‘ಅಗ್ನಿಪರೀಕ್ಷೆ’ ಎಂಬ ವಿಶೇಷ ಆಡಿಷನ್ ಸುತ್ತು ಕೊನೆಯ ಹಂತದಲ್ಲಿದೆ. ಆದ್ರೆ ಈ ವೇದಿಕೆಯಲ್ಲಿ ಈಗ ಸಣ್ಣದೊಂದು ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ.

ಆಡಿಷನ್‌ನ ಮೊದಲ ದಿನವೇ ‘ಸ್ಟಾರ್ ಸ್ಪರ್ಧಿ’ಯಾಗಿ ಹೊರಹೊಮ್ಮಿದ್ದ ಪೂರ್ಣಿಮಾ, ನಟಿ ಸಂಗೀತಾ ಶೃಂಗೇರಿ ತಂಡದ ಕ್ಯಾಪ್ಟನ್ ಆಗಿ ಪ್ರತಿಯೊಂದು ಟಾಸ್ಕ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಆದ್ರೆ ತಂಡದ ಸದಸ್ಯರಲ್ಲಿದ್ದ ಅಸಮಾಧಾನ ಹಾಗೂ ಕಿರಣ್ ಶಾಸ್ತ್ರಿ ಅವರಿಗೆ ಸಿಕ್ಕ ಜಾಕ್‌ಪಾಟ್‌ನಿಂದಾಗಿ ಪೂರ್ಣಿಮಾ ನೇರವಾಗಿ ನಾಮಿನೇಟ್ ಆಗಿ, ಡೇಂಜರ್‌ ಜೋನ್‌ನ ತಂಡವನ್ನು ಸೇರಬೇಕಾಯಿತು.

ಈ ಹಠಾತ್ ಬೆಳವಣಿಗೆಯಿಂದ ಭಾವುಕರಾದ ಪೂರ್ಣಿಮಾ, ಅಗ್ನಿಪರೀಕ್ಷೆ ವೇದಿಕೆಯ ವಿರುದ್ಧವೇ ಬಹಿರಂಗವಾಗಿ ಆರೋಪ ಮಾಡಿದ್ದಾರೆ. “ವೇದಿಕೆಯಲ್ಲಿರುವ ತೀರ್ಪುಗಾರರಿಗೆ ಬೆಲೆ ಇದೆ, ಆದ್ರೆ ಈ ಬಿಗ್ ಬಾಸ್‌ಗೆ ಇಲ್ಲ. ಈ ವೇದಿಕೆ ನನಗಲ್ಲ, ಇಲ್ಲಿ ಕೇವಲ ಲುಕ್, ಬ್ಯೂಟಿ, ಹೈಟ್ ಮತ್ತು ಸ್ಮಾರ್ಟ್ ಇರುವವರಿಗೆ ಮಾತ್ರ ಬೆಲೆ ಸಿಗುತ್ತದೆ” ಎಂದು ಗುಡುಗಿದ್ದಾರೆ. ಅಲ್ಲದೇ ಇದೇ ವೇಳೆ ಇನ್ನೂಬ್ಬ ಸ್ಪರ್ಧಿ ಕುಮಾರಿ ಸಹ ವೇದಿಕೆಯಲ್ಲಿ 3,4 ದಿನದಿಂದ ಇಲ್ಲ, ಈಗ ಅವಳಿಗೆ ಸಿಂಪತಿ ತೋರಿಸಿ ನನ್ನ ಬದಲಿಗೆ ಅವಳನ್ನ ಇಟ್ಟುಕೊಳ್ಳುವ ಪ್ಲ್ಯಾನ್‌ ಎಂದು ಸಂಶಯಾತ್ಮಕ ಪ್ರಶ್ನೆ ಹುಟ್ಟು ಹಾಕಿದ್ದಾರೆ.

ನಂತರ ಹೀಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ ಪೂರ್ಣಿಮಾ, ಸ್ವಂತ ನಿರ್ಧಾರ ತೆಗೆದುಕೊಂಡು ಅಗ್ನಿಪರೀಕ್ಷೆ ವೇದಿಕೆಯಿಂದ ದಿಢೀರ್ ಹೊರ ಬಂದಿದ್ದಾರೆ. ಪ್ರಸ್ತುತ ಅವರು ಶೋನಿಂದ ಸಂಪೂರ್ಣವಾಗಿ ಎಲಿಮಿನೇಟ್ ಆಗಿದ್ದಾರೆಯೇ ಅಥವಾ ಬಿಗ್ ಬಾಸ್ ಅವರನ್ನು ಸೀಕ್ರೆಟ್ ರೂಮ್‌ನಲ್ಲಿ ಇರಿಸಿದ್ದಾರೆಯೇ ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಉಳಿದಿದೆ.