SK Home Ad
Home ನಮ್ಮ ಜಿಲ್ಲೆ ಗದಗ ಎಚ್‌.ಕೆ. ಪಾಟೀಲರಿಗೆ ಅನ್ಯಾಯ: ಗದಗನಲ್ಲಿ ಕ್ಷೌರಸೇವೆ ಬಹಿಷ್ಕಾರ

ಎಚ್‌.ಕೆ. ಪಾಟೀಲರಿಗೆ ಅನ್ಯಾಯ: ಗದಗನಲ್ಲಿ ಕ್ಷೌರಸೇವೆ ಬಹಿಷ್ಕಾರ

0
520

ಗದಗ: ಹಿರಿಯ ಕಾಂಗ್ರೆಸ್ ಧುರೀಣ, ಶಾಸಕ ಡಾ. ಎಚ್.ಕೆ. ಪಾಟೀಲ್‌ರಿಗೆ ಸಚಿವ ಸ್ಥಾನ ನೀಡದೆ ಕಡೆಗಣಿಸಿರುವುದನ್ನು ವಿರೋಧಿಸಿ ಗದಗ ಜಿಲ್ಲೆಗೆ ಆಗಮಿಸುವ ಯಾವುದೇ ಸಚಿವರಿಗೆ ಕ್ಷೌರಸೇವೆ ನೀಡದಿರಲು ಜಿಲ್ಲಾ ಸವಿತಾ ಸಮಾಜ ನಿರ್ಧರಿಸಿದೆ.

ನೂತನ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಗೌರವಪೂರ್ವಕವಾಗಿ ಸ್ವಾಗತ ಕೋರಲಾಗುವುದು. ಸವಿತಾ ಸಮಾಜದ ಅಭಿವೃದ್ಧಿ ಸೇರಿದಂತೆ ಯಾವುದೇ ಮನವಿ ಸಲ್ಲಿಸುವುದಿಲ್ಲ. ಸಮಾಜದ ಸಮಸ್ಯೆಗಳ ಪರಿಹಾರವನ್ನು ಎಚ್.ಕೆ. ಪಾಟೀಲ್ ಅವರ ಮೂಲಕವೇ ಪಡೆಯುವುದಾಗಿ ಜಿಲ್ಲಾ ಸವಿತಾ ಸಮಾಜದ ತುರ್ತು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆಯೆಂದು ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ ತಿಳಿಸಿದರು.

ಎಚ್.ಕೆ. ಪಾಟೀಲ ರೈತರು, ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಪರ ನಿರಂತರವಾಗಿ ಧ್ವನಿಯೆತ್ತಿರುವ ನಾಯಕರು. ಅವರನ್ನು ಕಡೆಗಣಿಸಿರುವುದು ಶ್ರಮಿಕ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದಂತಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.