SK Home Ad
Home ನಮ್ಮ ಜಿಲ್ಲೆ ವಿಜಯಪುರ ಮೋದಿ ಯುಗ ಅಂತ್ಯ ಆರಂಭವಾಗಿದೆ: ಎಂ.ಬಿ. ಪಾಟೀಲ

ಮೋದಿ ಯುಗ ಅಂತ್ಯ ಆರಂಭವಾಗಿದೆ: ಎಂ.ಬಿ. ಪಾಟೀಲ

0
6

ವಿಜಯಪುರ: ನೀಟ್ ವಿಚಾರದಲ್ಲಿ ದೊಡ್ಡ ಮಟ್ಟದ ಹೋರಾಟದ ನಂತರ ಪ್ರಧಾನಿ ಮೋದಿ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತುಕೊಂಡು ಅನಿರ್ವಾಯವಾಗಿ ಶಿಕ್ಷಣ ಸಚಿವರ ರಾಜೀನಾಮೆ ಪಡೆದಿದ್ದಾರೆ. ಇದರೊಂದಿಗೆ ಮೋದಿ ಯುಗ ಅಂತ್ಯ ಆರಂಭವಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀಟ್ ಹಗರಣ ಮಾಡಿ ಕೇಂದ್ರ ಸರ್ಕಾರ 47 ದಿನಗಳ ಕಾಲ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿತು. ಇದರಿಂದ ಸುಮಾರು 20 ಮಕ್ಕಳು ಪ್ರಾಣ ಕಳೆದುಕೊಳ್ಳುವಂತಾಯಿತು. ಅಷ್ಟೇ ಅಲ್ಲ, ಮಾನಸಿಕ ಒತ್ತಡದಿಂದ ಅಂದಾಜು 1.5 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದಲೇ ವಂಚಿತರಾದರು. ಆದರೆ, ಇನ್ಮುಂದೆ ತಮ್ಮ ಸುಳ್ಳುಗಳು ನಡೆಯಲ್ಲ ಎಂಬುದು ಪ್ರಧಾನಿಗಳಿಗೂ ಗೊತ್ತಾಗಿದೆ ಎಂದು ವ್ಯಂಗ್ಯವಾಡಿದರು. ಮುಂದೆ ಎಥೆನಾಲ್ ಸಮಸ್ಯೆಯೂ ಉದ್ಭವಿಸಲಿದೆ. ದೇಶವನ್ನು ಅಧೋಗತಿಗೆ ಮೋದಿ ತೆಗೆದುಕೊಂಡು ಹೋಗಿದ್ದಾರೆ ಎಂದರು.

ನೀಟ್ ವಿಷಯದಲ್ಲಿ ಕೇಂದ್ರ ಸರ್ಕಾರದ ತಪ್ಪು ಯುವಕರಿಗೂ ಗೊತ್ತಾಗಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಇಡೀ ದೇಶದ ಯುವಕರು ಹೋರಾಟಕ್ಕೆ ಧುಮುಕಿದರು. ಬಿಜೆಪಿ ನಾಯಕರ ಮಕ್ಕಳು ಸಹ ಹೋರಾಟದಲ್ಲಿ ಭಾಗಿಯಾಗಿದ್ದರು. ಜೊತೆಗೆ ಕಾಕ್ರೋಚ್ ಜನತಾ ಪಕ್ಷ ಹಾಗೂ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಖರ್ಗೆ ಅವರ ಒತ್ತಡಕ್ಕೆ ಒಳಗಾಗಿ ಪ್ರಧಾನಿಗಳು ಶಿಕ್ಷಣ ಸಚಿವರ ರಾಜೀನಾಮೆ ಪಡೆದಿದ್ದಾರೆ ಎಂದು ನುಡಿದರು.